ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್ ಅಭ್ಯರ್ಥಿ ಪರ ಹೊಸಳ್ಳಿಯಲ್ಲಿ ಪ್ರಚಾರ

Mainashree
Updated On : 10 Apr 2014, 10:12 am

ಹಿರೇಕೆರೂರು:  ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ತಾಲೂಕಿನ ಹೊಸಳ್ಳಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ಮಾಜಿ ಶಾಸಕ ಬಿ.ಸಿ. ಪಾಟೀಲ, ಬಿ.ಎಚ್. ಬನ್ನಿಕೋಡ, ಅಶೋಕ ಪಾಟೀಲ ಹಾಗೂ ಪಕ್ಷದ ಮುಖಂಡರು, ಅಭಿಮಾನಿಗಳು ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸಿ. ಪಾಟೀಲ, ಬಿಜೆಪಿಯವರು ಮೋದಿ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ದೇಶದಲ್ಲಿ ಮೋದಿ ಅಲೆ ಮಂಕಾಗಿದೆ.  ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರವು ಹಲವಾರು ಹಗರಣಗಳಲ್ಲಿ ಸಿಲುಕಿ ಮೂರು ಹೋಳಾಗಿದ್ದು ಈಗ ಮತ್ತೆ ಒಂದಾಗಿ ಸ್ಪರ್ಧೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್‌ನಿಂದ ಮಾತ್ರ ದೇಶದಲ್ಲಿ ಸುಭದ್ರ ಆಡಳಿತ ನಡೆಸಲು ಸಾಧ್ಯ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ ಜನತೆಗೆ ನೀಡಿದ ಮಹತ್ತರ ಯೋಜನೆಗಳು ಅಭ್ಯರ್ಥಿಯ ಗೆಲುವಿಗೆ ಸಹಾಯಕಾರಿಯಾಗಲಿವೆ ಎಂದರು.
ಎಸ್.ಕೆ. ಕರಿಯಣ್ಣನವರ, ಜಿ. ಶಿವನಗೌಡ್ರ, ಎಸ್.ಬಿ. ತಿಪ್ಪಣ್ಣನವರ, ಬಿ.ಎನ್.ಬಣಕಾರ, ಅಶೋಕ ಪಾಟೀಲ, ಈರಬಸಪ್ಪ ಮತ್ತೂರ, ಏಕೇಶಪ್ಪ ಬಣಕಾರ ಮಂಜು ನಿಂಗನಗೌಡ್ರ, ಶಂಭು ಭರಮಗೌಡ್ರ, ಮಲ್ಲಪ್ಪ ಆರಿಕಟ್ಟಿ, ನಾಗರಾಜ ಬಣಕಾರ, ಮಲ್ಕಪ್ಪ ಹಂಚಿನಮನಿ, ಮಲ್ಲನಗೌಡ ಎತ್ತಿನಮನಿ, ಲಿಂಗರಾಜ ಪಾಟೀಲ, ಹನುಮಂತಪ್ಪ ಬಣಕಾರ, ಸೋಮಣ್ಣ ಮಾರವಳ್ಳಿ, ನಾಗರಾಜ ಪಾಟೀಲ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement