ಸಲೀಂ ಅಹ್ಮದ್ ರೋಡ್ ಶೋ
ಹಾವೇರಿ: ಜಾತ್ಯತೀತ ನಿಲುವಿನ ಸಲೀಂ ಅಹ್ಮದ್ರನ್ನು ಜನತೆ ಈ ಬಾರಿ ನಿಶ್ಚಿತವಾಗಿ ಚುನಾಯಿಸಲಿದ್ದು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಹಾವೇರಿ ವಿಧಾನಸಭಾ ಕ್ಷೇತ್ರದ ಅಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿ ಮತಯಾಚನೆ ಮಾಡಿದ ಅವರು, ಜಾತಿಯ ಹೆಸರಲ್ಲಿ ಮತ ಕೇಳುವ ಕಾಲ ಹೊರಟು ಹೋಗಿದ್ದು, ಜನತೆ ಪ್ರಬುದ್ಧರಾಗಿದ್ದಾರೆ. ಕೆಲಸ ಮಾಡುವರಿಗೆ ಮತ ನೀಡುತ್ತಾರೆಯೇ ಹೊರತು ಜಾತಿ ರಾಜಕಾರಣ ಮಾಡುವವರಿಗಲ್ಲ ಎಂದು ಹೇಳಿದರು. ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಗದೀಶ ಬೆಟಗೇರಿ, ಸುಜಾತಪ್ಪ ಚನ್ನೂರ, ಸಂಜಯ ರಾಜಶೇಖರ ಮಾಗಾವಿ, ಪರಮೇಶಪ್ಪ ಎಣ್ಣಿ, ಪುಟ್ಟಪ್ಪ ಮಾಗೋಡ, ಚನ್ನವೀರಪ್ಪ ಬಸೇಗಣ್ಣಿ, ಯಲ್ಲಪ್ಪ ಮಣ್ಣೂರ, ಹನುಮಂತರಾವ್ ಕುಲಕರ್ಣಿ, ಕರಿಯಪ್ಪ ಹುಚ್ಣನವರ, ಶಂಕರಗೌಡ ಹಟ್ಟಿ, ಸತೀಶ ಈಳಿಗೇರ, ಗೌಸುಸಾಬ ಮಿರ್ಜಾನವರ ಇತರರು ಇದ್ದರು.