ಅರವಿಂದ ಕೇಜ್ರಿವಾಲ್ ಮೇಲೆ ಹಲ್ಲೆ ಖಂಡನೀಯ: ಖಾಜಿ
ನರಗುಂದ: ರಾಜಧಾನಿಯಲ್ಲಿ ಆಮ್ ಆದ್ಮಿ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಮೇಲೆ ಇತರೆ ಪಕ್ಷಗಳು ಹತಾಶೆ ಮನೋಭಾವನೆಯಿಂದ ಪದೇಪದೆ ಅವರ ಮೇಲೆ ಹಲ್ಲೆ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಕುತುಬುದ್ದೀನ್ ಖಾಜಿ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಆಮ್ ಆದ್ಮಿ ಸಂಸ್ಥಾಪಕ ಅರವಿಂದ ಕ್ರೇಜಿವಾಲ್ ದೇಶದಲ್ಲಿ ಭ್ರಷ್ಠಾಚಾರ ವಿರುದ್ಧ ಹೋರಾಟದ ಮೂಲಕ ಕೆಳವರ್ಗ, ಮಧ್ಯಮ ವರ್ಗದ ಪ್ರೀತಿ ಗಳಿಸಿ ಕೇವಲ 8 ತಿಂಗಳಲ್ಲಿ ಆಮ್ ಆದ್ಮಿ ಅಭ್ಯರ್ಥಿಗಳು ದೆಹಲಿ ವಿಧಾನಸಭೆಗೆ ಸ್ಪರ್ಧಿಸಿ 28 ಕ್ಷೇತ್ರಗಲ್ಲಿ ಗೆದ್ದು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಕೀರ್ತಿ ಇವರಿಗೆ ಇದೆ. ಈ ಲೋಕಸಭಾ ಚುನಾವಣೆಯಲ್ಲಿ ದೇಶವ್ಯಾಪ್ತಿ 407 ಅಭ್ಯರ್ಥಿಗಳು ಆಮ್ ಆದ್ಮಿಯಿಂದ ಸ್ಪರ್ಧಿಸಿದ್ದು, ಒಂದು ವೇಳೆ ಇವರು ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಇತರೆ ನಾಯಕರು ಕೂಡಿಕೊಂಡು ಮಾಡಿರುವ ಭ್ರಷ್ಟಾಚಾರ ಬಯಲಿಗೆ ಬಂದು ಸೆರೆಮನೆಗೆ ಹೋಗುವುದು ಖಚಿತ ಎಂದು ಹೆದರಿ ಪದೇಪದೆ ಕೆಜ್ರೀವಾಲ್‌ರ ಮೇಲೆ ಈ ರೀತಿ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಮೇಶ ಪಾತ್ರೋಟಿ, ಕಾಂತೇಶ ಭಜೇಂತ್ರಿ, ಪ್ರಶಾಂತ ಲಮಾಣಿ, ನಾಗಾರಾಜ ಕಲ್ಲಕೂಟಿರಿ, ಆಶಿಫ ಖಾಜಿ, ಗಿರೀಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.