ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಸರ ಸಂರಕ್ಷಣೆ ಗುಣವಿರಲಿ

Mainashree
Updated On : 11 Apr 2014, 10:50 am

ಹಾನಗಲ್ಲ: ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಪರಿಸರ ಸಂರಕ್ಷಣೆ ಮತ್ತು ವನ್ಯ ಜೀವಿಗಳೆಡೆಗೆ ಪ್ರೀತಿ, ಕಾಳಜಿಯ ಗುಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು ಎಂದು ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಮೊರಪ್ಪನವರ ಹೇಳಿದರು.
ಹಾನಗಲ್ಲ ತಾಲೂಕಿನ ಗುಂಡೂರು ಗ್ರಾಮ ಸಮೀಪದ ಹಾವೇರಿ ಜಿಲ್ಲಾ ಜವಾಹರ ನವೋದಯ ಶಾಲೆಯಲ್ಲಿ ಹಾನಗಲ್ ಅರಣ್ಯ ಇಲಾಖೆ ವತಿಯಿಂದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಜೀವನ ಶೈಲಿಯ ಪರಿಣಾಮ ಪರಿಸರ ಅಪಾಯದ ಅಂಚಿಗೆ ತಲುಪಿದೆ ಎಂಬುದನ್ನು ಅರಿತು ಪರಿಸರ ಕಾಳಜಿಗೆ ಗಮನ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಪರಿಸರ ಜಾಗೃತಿ ಕುರಿತು ಚಿಕ್ಕಮಗಳೂರಿನ ವನ್ಯಜೀವಿ ಪರಿಪಾಲಕ ಡಿ.ವಿ. ಗಿರೀಶ್ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಕಾರ್ಯಕ್ರಮ ಉದ್ಘಾಟಿಸಿದರು. ಹಾವೇರಿಯ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಿ.ಎಂ. ಅಮ್ಮನವರ, ಹಾನಗಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ಪೀರಜಾದೆ, ನವೋದಯ ಶಾಲೆಯ ಪ್ರಾಚಾರ್ಯ ಜಿ. ವಳ್ಳಿಯಮ್ಮಯಿ, ಶಿಕ್ಷಕ ಸಿ.ಎಚ್. ದಿನೇಶ ಇದ್ದರು. ವಿ.ಆರ್. ಪಾಟೀಲ ನಿರೂಪಿಸಿದರು. ಶಾಲೆಯ ಶಿಕ್ಷಕಿ ಯು.ಎಸ್. ಬಳ್ಳಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement