ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಿಂಡೂರ ನಿರ್ಣಯಕ್ಕೆ ವಿರೋಧ

Lingaraj Badiger
Updated On : 13 Apr 2014, 10:18 am

ಶಿಗ್ಗಾಂವಿ: ಪಟ್ಟಣದ ಶಂಕರಗೌಡ್ರ ಪಾಟೀಲ ಅವರ ಮನೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಂಘಟನೆ ಸಭೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮತ ಹಾಕುವಂತೆ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ದಿಂಡೂರ ನಿರ್ಣಯದ ವಿರುದ್ಧ ಸಮಾಜದ ಅನೇಕ ಮುಖಂಡರು ವಿರೋಧ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಸಮಾಜದ ಸಂಘಟನೆ, ಮತ್ತಿತರ ಸಮಾಜ ಅಭಿವೃದ್ಧಿ ಕುರಿತು ಚರ್ಚೆಯಾಗಲಿ ಹೊರತು, ರಾಜಕೀಯ ಪಕ್ಷ, ವ್ಯಕ್ತಿ ಪರವಾದ ನಿಲುವು ಸಮಾಜ ನಿರ್ಣಯ ತೆಗೆದುಕೊಳ್ಳುವುದು ಬೇಡ ಎಂದು ಉಪಸ್ಥಿತರಿದ್ದ ಮುಖಂಡರ ಸಲಹೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ದಿಂಡೂರ, ಜತೆಗೆ ಬಂದಿದ್ದ ಭಾವಿಬೆಟ್ಟಪ್ಪ ಹಿಂತಿರುಗಿದರು. ಈ ಸಂದರ್ಭ ಸಮಾಜದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement