ಸುಳ್ಳು ಪ್ರಮಾಣಪತ್ರ ನೀಡಿದರೆ ಕ್ರಮ
ಹಾವೇರಿ: ಬೇಡ ಜಂಗಮ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವ ಮೂಲಕ ಇನ್ನೊಬ್ಬರ ಹಕ್ಕು ಕಿತ್ತುಕೊಳ್ಳುವವರ ಮೇಲೆ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಂಜನೇಯ ಅವರ ರಾಜಿನಾಮೆ ಪಡೆಯಬೇಕು ಎಂಬ ಕೊಳದ ಮಠದ ಸ್ವಾಮೀಜಿ ಹೇಳಿಕೆ ಕುರಿತು ಕೇಳಿದಾಗ, ಮಾದಿಗ ಜನಾಂಗದಲ್ಲಿ ಕೆಲವರು ಅಲೆಮಾರಿಗಳಾಗಿದ್ದು ಅವರು ಒಲೆ ಹಚ್ಚುವುದಿಲ್ಲ. ಇನ್ನೊಬ್ಬರ ಬಳಿ ಬೇಡಿಕೊಂಡೇ ಬದುಕು ಸಾಗಿಸುತ್ತಾರೆ. ಸತ್ತ ದನದ ಮಾಂಸ ತಿನ್ನುವ ಆಹಾರ ಪದ್ಧತಿ ಹೊಂದಿದ್ದಾರೆ. ಅಂಥ ನಿಜವಾದ ಬೇಡ ಜಂಗಮರಿಗೆ ಮಾತ್ರ ಬೇಡ ಜಂಗಮ ಜಾತಿ ಪ್ರಮಾಣ ಕೊಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಸಚಿವರು ತಿಳಿಸಿದರು.