ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮದ್ಯಪಾನ ನಿಷೇಧದಿಂದ ಸಮಾಜ ಸದೃಢ: ಸುರೇಶ

Lingaraj Badiger
Updated On : 14 Apr 2014, 11:29 am

ಹಿರೇಕೆರೂರು:  ಸಮಾಜದಲ್ಲಿರುವ ಮನುಷ್ಯರ ವಿವಿಧ ಕಲಹಗಳಿಗೆ ದಾರಿ ಮಾಡಿಕೊಡುವ ಮದ್ಯವನ್ನು ಸಂಪೂರ್ಣವಾಗಿ ಬಿಡಬೇಕು. ಇದರಿಂದ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವಿದೆ ಎಂದು ಜೆಸಿಐ ಅಧ್ಯಕ್ಷ ಸುರೇಶ ಅಘನಾಸಿನಿಕರ ಹೇಳಿದರು.
ಅವರು ತಾಲೂಕಿನ ರಟ್ಟಿಹಳ್ಳಿಯ ಸಾಮಾಜಿಕ ಸೇವೆಯ ಕದಂಬ ಸೇವಾ ಟ್ರಸ್ಟ್ ವಿಶ್ವ ಆರೋಗ್ಯ ದಿನಾಚರಣೆಯ ನಿಮಿತ್ತ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜನಜಾಗೃತಿ ಮತ್ತು ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಹೊಸ ವರ್ಷವನ್ನು ಕುಡಿತದ ಅಮಲಿನಿಂದಲೇ ಅರಂಭ ಮಾಡುವಂಥ ಸಾಮಾಜಿಕ ಪೀಡೆಯಾದ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದುರಂತವೇ ಆಗಿದೆ. ಕುಟುಂಬ ಕಲಹ, ಸಮಾಜಿಕ ಮೌಢ್ಯ, ದೊಂಬೆ ಕಲಹಗಳಿಗೆ ಹಾದಿ ಮಾಡಕೊಡುವುದು ಮದ್ಯಪಾನದ ಬಲಿಗೆ ಒಳಗಾಗಿರುವ ವ್ಯಕ್ತಿಗಳದ್ದಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮದ್ಯಪಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವದು ವಿಷಾದದ ಸಂಗತಿ ಎಂದರು. ಜೆಸಿಐ ಉಪಾಧ್ಯಕ್ಷ ಕೃಷ್ಣರಾಜ ವೇರ್ಣೆಕರ, ಕದಂಬ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಪ್ರದೀಪ ಕುಲಕರ್ಣಿ, ಮಾಲತೇಶ ಮಾಳಗಿ, ಸುಬ್ರಹ್ಮಣ್ಯ ನಾಡಿಗೇರ ಲೋಕಶ ಗುಬ್ಬಿ, ಉಷಾಮಕರಿ, ಗಿರೀಜಾ ನಾಡಿಗೇರ, ಶೋಭಾ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement