ಸಲೀಂ ಅಹ್ಮದ್ ಪರ ಪ್ರಚಾರ
ರಾಣಿಬೆನ್ನೂರು: ಕಾಂಗ್ರೆಸ್ ಕೈಯಲ್ಲಿ ದೇಶದ ಅಧಿಕಾರವನ್ನು ಮತದಾರರು ನೀಡಿದರೆ ಮಾತ್ರ ದೇಶದ ಎಲ್ಲಾ ವರ್ಗದ ಜನ ನೆಮ್ಮದಿಯಿಂದಿರಲು ಸಾಧ್ಯ ಎಂದು ತಾಲೂಕು ಪ್ರದೇಶ ಕಾಂಗ್ರೆಸ್ ಎಸ್ಟಿ ಘಟಕಾಧ್ಯಕ್ಷ ಚಂದ್ರಣ್ಣ ಬೇಡರ ಹೇಳಿದರು. ತಾಲೂಕಿನ ಪೂರ್ವ ಭಾಗದ ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಪರ ಮತ ಯಾಚಿಸಿ ಮಾತನಾಡಿದರು. ಜಿಲ್ಲಾ ಎಸ್ಟಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ನಾಗಪ್ಪಸಣ್ಣಮನಿ, ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕ ಕಾರ್ಯದರ್ಶಿ ಬಿ.ಟಿ. ಬಸವರಾಜ, ನ್ಯಾಯವಾದಿ ಕೆಂಚಪ್ಪ ನಾಗಮ್ಮನವರ, ಮಾರುತಿ ಎಚ್. ಟಿ, ನಾಗಪ್ಪ ಕಾಡಜ್ಜಿ ಉಪಸ್ಥಿತರಿದ್ದರು.