ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇಶದ ಬದಲಾವಣೆಗೆ ಬಿಜೆಪಿಗೆ ಮತ ನೀಡಿ

Lingaraj Badiger
Updated On : 16 Apr 2014, 1:40 am

ಲಕ್ಷ್ಮೇಶ್ವರ:  ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುವ ಸರ್ಕಾರ ನಮಗೆ ಬೇಕಾಗಿದೆ ಎಂದು ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.  ಸಮಿಪದ ಶಿಗ್ಲಿ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ಮೂಲಕ ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತ ಮತ ಯಾಚನೆ ಮಾಡಿದರು. ಬಡವರ ದೀನ ದಲಿತರ ಬಗ್ಗೆ ಬರೀ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು ಬಿಜೆಪಿ ಅಧಿಕಾರಕ್ಕೆ ತರುವುದು ನಿಮ್ಮ ಗುರಿಯಾಗಿರಲಿ ಎಂದರು.  ಪಾದಯಾತ್ರೆಯಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಡಾ. ವೈ.ಎಫ್. ಹಂಜಿ, ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಜಿಪಂ ಸದಸ್ಯೆ ನಿರ್ಮಲಾ ಬರದೂರ, ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಸೋಮಣ್ಣ ಡಾಣಗಲ್, ಸದಸ್ಯ ಕೃಷ್ಣಾ ಬದರಳ್ಳಿ, ಈರಪ್ಪ ಹತ್ತಿಕಾಳ, ಎಚ್.ಎಫ್. ತಳವಾರ, ವೀರಣ್ಣ ಪವಾಡದ, ಈರಣ್ಣ ಅಕ್ಕೂರ, ಅಶೋಕ ಶಿರಹಟ್ಟಿ, ಚೆಂಬಣ್ಣ ಬಾಳಿಕಾಯಿ, ಸಿದ್ದಣ್ಣ ಯಲಿಗಾರ, ಮಂಜುನಾಥ ಬದಿ, ಚೆಂದ್ರು ತಳವಾರ, ಸುರೇಶ ಬರದೂರ, ಕೇಶವ ಗುಲಗಂಜಿ, ಶೋಭಾ ಲಮಾಣಿ, ರಾಮಣ್ಣ ಡಂಬಳ, ಭರಮಣ್ಣ ಗುಡಗೇರಿ, ಭರಮಣ್ಣ ರೊಟ್ಟಿಗವಾಡ, ಈಶ್ವರ ಸೊರಟೂರ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜಕಣ್ಣವರ, ಫಕ್ಕೀರಗೌಡ್ರ ದೊಡ್ಡಗೌಡರ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement