ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಠಾಧೀಶರ ನೇತೃತ್ವದಲ್ಲಿ ಮತದಾನ ಜಾಗೃತಿ

Lingaraj Badiger
Updated On : 16 Apr 2014, 1:41 am

ಹಾವೇರಿ:  ನಗರದ ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಗಳಾದ ಜೆ.ಸಿ. ಸಂಸ್ಥೆ, ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ತಾಲೂಕು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಸಾಹಿತಿ ಕಲಾಬಳಗದ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಜಾಥಾ ಮೇಣಬತ್ತಿ ಮೆರವಣಿಗೆಯೊಂದಿಗೆ ಜರುಗಿತು.
ಮತದಾನದ ಹಕ್ಕು ಕುರಿತು, ಮತಚಲಾವಣೆ ಆಗ್ರಹಿಸುವ ಮೇಣಬತ್ತಿ ಮೆರವಣಿಗೆ ಇಲ್ಲಿಯ ಜೆ.ಪಿ. ವೃತ್ತದಿಂದ ಗಾಂಧಿ ವೃತ್ತದವರೆಗೆ ಜನರ ಗಮನ ಸೆಳೆಯುವ ರೀತಿಯಲ್ಲಿ ನಡೆಯಿತು. ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಗೌರಿಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಈ ಜಾಗೃತಿ ಜಾಥಾದ ನೇತೃತ್ವ ವಹಿಸಿದ್ದರು. ಪ್ರತಿಯೊಬ್ಬರೂ ಮತದಾನವನ್ನು ಪ್ರಜಾಪ್ರಭುತ್ವದ ಶಕ್ತಿ ಎಂದು ಭಾವಿಸಿ ಚಲಾಯಿಸಬೇಕೆಂದು ಸದಾಶಿವ ಸ್ವಾಮಿಗಳು ನುಡಿದರು. ಗೌರಿಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಬಣ್ಣದ ಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಸ್ವಾಮಿಗಳು   ಮಾತನಾಡಿದರು. ಡಾ. ಶಿವಾನಂದ ಕೆಂಬಾವಿ, ಶರತ್ ಮಲ್ಲನಗೌಡರ, ಸಿದ್ಧಣ್ಣ ಕಬ್ಬೂರ, ಎಸ್.ಸಿ. ಕಲ್ಮನಿ ವಿವಿಧ ಸಂಘಟನೆಗಳ ಕಾರ್ಯದರ್ಶಿಗಳಾದ ಸರ್ವಶ್ರೀ ಎಂ.ಆರ್. ಪಾಟೀಲ, ಸಂಜೀವ ರಿತ್ತಿ, ರಮೇಶ ಪಾಟೀಲ ಹಾಗೂ ಎಲ್ಲ ಹಿರಿಯ ಕಿರಿಯ ಸದಸ್ಯರು ಭಾಗವಹಿಸಿದ್ದರು. ರವಿ ಹಿಂಚಿಗೇರಿ ಸ್ವಾಗತಿಸಿದರು. ಸಭೆಯನ್ನು ಕಲಾಬಳಗದ ನಾಗರಾಜ ನಡುವಿನಮಠ ನಡೆಸಿಕೊಟ್ಟರು. ಆರ್.ಸಿ. ನಂದಿಹಳ್ಳಿ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement