ಅಂಬೇಡ್ಕರ್ ಜನ್ಮದಿನ ಆಚರಣೆ
ಹಿರೇಕೆರೂರು: ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಡುಬಡತನದಲ್ಲಿ ಜನಿಸಿ ದೇಶದ ಪವಿತ್ರ ಸಂವಿಧಾನ ರಚಿಸುವ ಮೂಲಕ ದಲಿತರಿಗೆ, ಶೋಷಿತರಿಗೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿದ ಮಹಾನ್ ವ್ಯಕ್ತಿ ಎಂದು ಎಸ್.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಸಹಕಾರಿ ವಿದ್ಯಾ ಸಂಸ್ಥೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 123ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಬದುಕಿನ ಘಟ್ಟಗಳನ್ನು ವಿವರಿಸುತ್ತಾ ಈ ದೇಶದ ಕಾನೂನು ಮಂತ್ರಿಯಾಗಿ ದೇಶದ ಎಲ್ಲ ಪ್ರಜೆಗಳು ಪ್ರತಿಯೊಬ್ಬರು ಸಮಾನವಾಗಿ ಬದುಕು ನಡೆಸಬೇಕು, ಯಾವುದೇ ಮೇಲು ಕೀಳೆಂಬ ಮನೋಭಾವನೆ ಇಲ್ಲದೆ ಸಮಾನತೆಯಿಂದ ಜೀವನ ನಡೆಸುವುದು, ಸರ್ವರಿಗೂ ಸಮಬಾಳು, ಸಮಪಾಲು ಎಂಬ ನೀತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರು ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಟಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಬಿ. ಚೆನ್ನಗೌಡ್ರ, ಬಿಇಡಿ ಕಾಲೇಜು ಪ್ರಾಚಾರ್ಯ ಬಿ.ಪಿ. ಹಳ್ಳೇರ, ಮುಖ್ಯೋಪಾಧ್ಯಾಯ ಸಿ.ಆರ್. ಹುಲ್ಲತ್ತಿ, ಎಲ್.ಸಿ. ಲಮಾಣಿ, ಬಿ.ವಿ. ಸನ್ನೇರ, ಎಂ.ಜಿ. ಕಡದಕಟ್ಟಿ, ಶಾಲಾ ಕಾಲೇಜ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸತೀಶ ಬಣಕಾರ ನಿರೂಪಿಸಿ, ವಂದಿಸಿದರು.