ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ಆರೋಪ

Lingaraj Badiger
Updated On : 19 Apr 2014, 11:33 am

ಬ್ಯಾಡಗಿ:  ನಿಷ್ಪ್ರಯೋಜಕ ಅಂಗನವಾಡಿ ಕಟ್ಟಡವೊಂದರಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಸಾರ್ವಜನಿಕರ ಸಹಕಾರದೊಂದಿಗೆ ಹಿಗ್ಗ್ಗಾಮುಗ್ಗಾ ಥಳಿಸಿದ ಘಟನೆ ಪಟ್ಟಣದ ಜನತಾ ಪ್ಲಾಟ್‌ನಲ್ಲಿರುವ ಸ್ವಾತಂತ್ರ್ಯಯೋಧರ ಭವನದ ಬಳಿ ಶುಕ್ರವಾರ ಸಂಜೆ ನಡೆದಿದೆ.
ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಬಳಕೆ ಮಾಡುತ್ತಿರಲಿಲ್ಲ. ನಡು ವಯಸ್ಸಿನ ಅನಾಮಧೇಯ ವ್ಯಕ್ತಿಗಳಿಬ್ಬರು ಕಟ್ಟಡದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಜನತಾ ಪ್ಲಾಟ್‌ನಲ್ಲಿರುವ ಸಾರ್ವಜನಿಕರು, ಕರವೇ ಕಾರ್ಯಕರ್ತರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಕರವೇ ಕಾರ್ಯರ್ತಕರ್ತರು ಇಬ್ಬರನ್ನು ಥಳಿಸಿದ್ದು, ಇನ್ನೊಂದು ಬಾರಿ ಈ ಕಡೆ ತಲೆಹಾಕದಂತೆ ತಾಕೀತು ಮಾಡಿ ಕಳುಹಿಸಿದರು..
ವಾಗ್ವಾದ: ಘಟನೆ ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ ಹಾಗೂ ಎಂ.ಪಿ. ಯಲ್ಲಣ್ಣನವರ ಕೊಪೋದ್ರಿಕ್ತ ಸಾರ್ವಜನಿಕರನ್ನು ಸಮಾಧಾನ ಪಡಿಸಲು ಮುಂದಾದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಛತ್ರದ, ಅಂಗನವಾಡಿ ಕಟ್ಟಡವನ್ನು ಶಿಥಿಲಗೊಳಿಸಿ ಬೇರೆಡೆಗೆ ನಿರ್ಮಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿದ್ದು, ಇದಕ್ಕೆ ಪುರಸಭೆಯೇ ಅಪ್ರತ್ಯಕ್ಷವಾಗಿ ಹೊಣೆ ಎಂದು ಆರೋಪಿಸಿದರು.
ಬಸವರಾಜ ಹಾವನೂರ ಮಾತನಾಡಿ,  ಕಟ್ಟಡ ನಿರ್ಮಿಸುವಾಗಲೇ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು. ಅವೈಜ್ಞಾನಿಕವಾಗಿ ನಿರ್ಮಿಸಿದ ಕಟ್ಟಡಗಳು ಈ ರೀತಿ ನಿಷ್ಪ್ರಯೋಜಕವಾಗಲಿವೆ. ಅದೂ ಸ್ವಾಭಿಮಾನದ ಸಂಕೇತವಾಗಿರುವ ಸ್ವಾತಂತ್ರ್ಯಯೋಧರ ಭವನದ ಬಳಿ ಇಂತಹ ಚಟುವಟಿಕೆ ನಡೆಯುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಮಖ್ಯಾಧಿಕಾರಿ ಮಾತನಾಡಿ, ಕಟ್ಟಡವನ್ನು ನೆಲಸಮಗೊಳಿಸುವ ಅಧಿಕಾರ ಪುರಸಭೆ ವ್ಯಾಪ್ತಿಯಲ್ಲಿ ಬರುವುದಿಲ್ಲ, ಲೋಕೋ ಪಯೋಗಿ ಇಲಾಖೆ ವರದಿ ಅಧಾರದ ಮೇಲೆ ನಿರ್ಣಯಿಸಬೇಕಾಗುತ್ತದೆ. ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಕಾಮಗಾರಿ ಕಳಪೆಯಾಗಿದ್ದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಬೇಕಾಗಿದೆ ಎಂದು ಸಮಜಾಯಿಷಿ ನೀಡಿ ಅಲ್ಲಿಂದ ಕಾಲ್ಕಿತ್ತರು. ಜಿತೇಂದ್ರ ಸುಣಗಾರ, ಕೃಷ್ಣ ಕರ್ಚಾಡ, ಮಂಜುನಾಥ ಶಿರವಾಡಕರ್, ಹನುಮಂತಪ್ಪ ಬೂದಗಟ್ಟಿ, ರಾಜು ಬಸಾಪುರ, ಹನುಮಂತಪ್ಪ ಭೋವಿ  ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement