ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೌರ್ಜನ್ಯ ಖಂಡನೆ: ಗಡಿಪಾರಿಗೆ ಆಗ್ರಹ

Mainashree
Updated On : 21 Apr 2014, 9:53 am

ಕನ್ನಡಪ್ರಭ ವಾರ್ತೆ, ರೋಣ, ಏ. 20 ಮಂಡ್ಯ ಜಿಲ್ಲೆಯ ರಾಗಿಮುದ್ದೇನಹಳ್ಳಿಯಲ್ಲಿ ಈಚೆಗೆ ಸವರ್ಣೀಯರಿಂದ ದಲಿತರ ಮೇಲೆ ನಡೆದ ದೌರ್ಜನ್ಯ ತೀವ್ರ ಖಂಡನಾರ್ಹ.
ಕೂಡಲೇ ದೌರ್ಜನ್ಯ ಎಸಗಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪ್ರಕಾಶ ಹೊಸಳ್ಳಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಿರಂತರ ದೌರ್ಜನ್ಯ ಜರುಗುತ್ತಿವೆ. ಈ ರೀತಿ ಪದೇಪದೆ ದಲಿತರ ಮೇಲೆ ಅನ್ಯಾಯವಾಗುತ್ತಿದ್ದಲ್ಲಿ ದಲಿತರು ಮುಕ್ತವಾಗಿ ಬದುಕುವುದು ದುಸ್ಥರವಾಗಿದೆ. ಆದ್ದರಿಂದ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಸಮಿತಿ ಪದಾಧಿಕಾರಿಗಳಾದ ಮೌನೇಶ ಹಾದಿಮನಿ, ಪುರಸಭೆ ಮಾಜಿ ಅಧ್ಯಕ್ಷ ಹಿರಿಯಪ್ಪ ಹಲಗಿ, ದೇವೇಂದ್ರಪ್ಪ ಕೊಳ್ಳಪ್ಪನವರ, ಸಂಗಪ್ಪ ಹೊಸಮನಿ, ಪರಸಪ್ಪ ಮಾದರ, ಮಲ್ಲು ಮಾದರ, ಮಂಜುನಾಥ ದೊಡ್ಡಮನಿ, ಮುತ್ತಪ್ಪ ಜೋಗಣ್ಣವರ, ಸುರೇಶ ನಡುವಿನಮನಿ ಮುಂತಾದವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement