ಹಾರೋಗೊಪ್ಪದಲ್ಲಿ ವಾಲ್ಮೀಕಿ ಭವನ ಉದ್ಘಾಟನೆ
ರಾಣಿಬೆನ್ನೂರು: ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನ ಹಾಗೂ ಮಹರ್ಷಿ ವಾಲ್ಮೀಕಿ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಮೇ 1, 2 ರಂದು ನಡೆಯಲಿದೆ. ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನ ಪೀಠಾಧಿಪತಿ ಪ್ರಸನ್ನಾನಂದಪುರಿ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಎರೇಹೊಸಳ್ಳಿಯ ವೇಮಾನಂದ ಮಠದ ಯೋಗಿ ವೇಮಾನಂದ ಶ್ರೀಗಳು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ಲಿಂಗದಹಳ್ಳಿ ಶ್ರೀ ಕ್ಷೇತ್ರದ ರಂಬಾಪುರಿ ಶಾಖಾ ಮಠದ ಷ ಬ್ರ ವೀರಭದ್ರ ಶಿವಾಚಾರ್ಯ ಶ್ರೀಗಳು, ನಾಗರಾಜಾನಂದ ಶ್ರೀಗಳು, ಬಡಾಸಂಗಾಪುರ ಸಿದ್ಧಾರೂಢ ಮಠದ ಹನುಮಾರೋಡಜ್ಜನವರು, ಹುಲ್ಲತ್ತಿ ಗ್ರಾಮದ ನರಸಿಂಹ ಸ್ವಾಮಿಮಠದ ಧರ್ಮದರ್ಶಿ ಬಸವರಾಜ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಚಿವ ಸತೀಶ ಜಾರಕಿಹೊಳಿ, ಶಾಸಕ ಕೆ.ಬಿ. ಕೋಳಿವಾಡ, ಜಿಪಂ ಸದಸ್ಯ ಸಂತೋಷ ಪಾಟೀಲ್, ಶಿವಕುಮಾರ ಮುದ್ದಪ್ಪಳವರ, ಮಂಜುನಾಥ ಓಲೇಕಾರ ಮತ್ತಿತರರು ಆಗಮಿಸುವರು.