ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ

Mainashree
Updated On : 4 Feb 2014, 10:51 am

ಶಿಗ್ಗಾಂವಿ:  ಶಿಕ್ಷಕ ಸಮುದಾಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜತೆಗೆ ಸರ್ಕಾರ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡೀನ ಹೇಳಿದರು.
ಅವರು ತಾಲೂಕಿನ ಶಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಣಾ ಗೋಡೆಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಉಚಿತ ಸೈಕಲ್‌ವಿತರಿಸಿ ಮಾತನಾಡಿದರು.
ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮತ್ತು ಇತರೆ ಮೂಲ ಸೌಲಭ್ಯಕ್ಕಾಗಿ ನೆರವು ನೀಡುವುದಾಗಿ ತಿಳಿಸಿದ ಅವರು, ಗ್ರಾಮದ ಗ್ರಾಮದೇವತೆ ದೇವಸ್ಥಾನಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಇ. ಕೋಡ್ಲಿ ಮಾತನಾಡಿದರು.
ಶೇಖರಗೌಡ ಪಾಟೀಲ್, ಎಸ್‌ಡಿಎಂಸಿ ಉಪಾಧ್ಯಕ್ಷ ಉಮೇಶ ತಳವಾರ, ಸದಸ್ಯರಾದ ಚನ್ನಪ್ಪ ಶಿರಬಡಗಿ, ಕೋಟೆಪ್ಪ ತಳವಾರ, ಶಿವನಗೌಡ ಪಾಟೀಲ್, ನಿಂಬಮ್ಮ ಹಿರೇಮಠ, ಗ್ರಾಪಂ ಸದಸ್ಯ ನಾಗಪ್ಪ ಹರಿಜನ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೆ.ಬಿ. ದೊಡ್ಡಮನಿ, ಎನ್.ಎಂ. ಹುಲೇಕಲ್ಲ, ಜಿ.ಎನ್. ಬಮ್ಮನಹಳ್ಳಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement