ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 4 Feb 2014, 11:03 am

ದೇಶದ ಅಭಿವೃದ್ಧಿಗೆ ಅನಕ್ಷರತೆ ಶಾಪ
ಹಿರೇಕೆರೂರು: ದೇಶದ ಅಭಿವೃದ್ಧಿಗೆ ಅನಕ್ಷರತೆ ಶಾಪವಾಗಿದ್ದು, ಅಕ್ಷರತೆಯನ್ನು ಸಂಪೂರ್ಣವಾಗಿ ನಾಶಮಾಡಿ, ಸಾಕ್ಷರತೆಯನ್ನು ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಾಕ್ಷರರು ಕೈಜೋಡಿಸಬೇಕೆಂದು ಗ್ರಾಮಪಂಚಾಯತ ಅಧ್ಯಕ್ಷೆ ರೇಖಾ ಉಪ್ಪಾರ ಕರೆ ನೀಡಿದರು.  ಅವರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಸಾಕ್ಷರ ಭಾರತ 2012,  ಗ್ರಾಮ ಪಂಚಾಯತ್ ಲೋಕಶಿಕ್ಷಣ ಕೇಂದ್ರದ ವತಿಯಿಂದ ಲೋಕ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿರುವ ನವ ಸಾಕ್ಷರರಿಗೆ ಮೂರನೇ ಹಂತದ ಕಲಿಕೆಗಾಗಿ ಸ್ವಯಂ ಸೇವಕ ಬೋಧಕರಿಗೆ 4 ದಿನಗಳ ಪಠ್ಯಾಧಾರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಪಡೆದು ಸಾಕ್ಷರರಾಗಬೇಕು ಎಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಕ್ಷರ ಜ್ಞಾನ ನೀಡುವುದು ಪುಣ್ಯದ ಕೆಲಸ. ನಿಸ್ವಾರ್ಥ ಸೇವೆ ಸಲ್ಲಿಸುವುದರೊಂದಿಗೆ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಜಿ.ಎಂ. ಎಣ್ಣೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಅತ್ತಿಕಟ್ಟಿ, ಬಿ.ಎಸ್. ದೊಡ್ಡಗೌಡ್ರ, ಲಕ್ಷ್ಮಣ ತಳವಾರ, ಕೆ. ಶಕುಂತಲಾ, ಪ್ರೇರಕ ದೇವರಾಜ ಮಾನೇರ, ವಿವಿಧ ಸಾಕ್ಷರತಾ ಕೇಂದ್ರಗಳ ಪ್ರೇರಕರು ಭಾಗವಹಿಸಿದ್ದರು.
ಹುತಾತ್ಮರ ದಿನಾಚರಣೆ
ಹಿರೇಕೆರೂರು: ತಾಲೂಕಿನ ಕವಳಿಕುಪ್ಪಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ  ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯೋಪಾಧ್ಯಾಯ ಎಸ್.ಬಿ. ಗುಡಿಹಿಂದ್ಲರ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಅಂಗಡಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇಂದು ವಿಎಚ್‌ಪಿಸಮಾವೇಶ
ಗದಗ: ವಿಶ್ವ ಹಿಂದೂ ಪರಿಷದ್ ಗದಗನ ಆಶ್ರಯದಲ್ಲಿ ಫೆ. 4ರಂದು ಸಂಜೆ 5.30ಕ್ಕೆ ಸ್ಥಳೀಯ ಸರಾಫ್ ಬಜಾರದಲ್ಲಿರುವ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮರಕ್ಷಾನಿಧಿ ಹಾಗೂ ಹಿತಚಿಂತಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರೋಣದ ಗುಲಗಂಜಿ ಮಠದ ಗುರುಪಾದ ದೇವರು ಸಾನ್ನಿಧ್ಯ ವಹಿಸುವರು. ವಿಶ್ವ ಹಿಂದೂ ಪರಿಷದ್‌ನ ದಕ್ಷಿಣ ಮಧ್ಯ ಕ್ಷತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲಜೀ ಆಗಮಿಸುವರು. ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ರವಿಕಾಂತ ಅಂಗಡಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಐಸಿಸಿಯಲ್ಲಿ ಮಹಿಳೆಯರಿಗಾಗಿ ಕಂಪ್ಯೂಟರ್ ತರಬೇತಿ
ಹಾನಗಲ್ಲ: ಕೇವಲ ಖನಿಜಗಳು ಮಾತ್ರ ಸಂಪತ್ತಲ್ಲ, ಮಾನವನ ಬುದ್ಧಿಶಕ್ತಿಯೇ ಶ್ರೇಷ್ಠ ಸಂಪತ್ತು. ಅದನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಚಾರ್ಯ, ಗಾಯಿತ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಲಲಿತಾ ದೇಸಾಯಿ ಹೇಳಿದರು. ಪಟ್ಟಣದ ಇಂಡಿಯನ್ ಕಂಪ್ಯೂಟರ್ ಸೆಂಟರ್ ಆಯೋಜಿಸಿದ ಮಹಿಳೆಯರಿಗಾಗಿ ಕಂಪ್ಯೂಟರ್ ತರಬೇತಿ ಶಿಬಿರ ಸ್ಪಂದನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಮಹಿಳೆಯರಿಗಾಗಿಯೇ ಹೊರತಂದ ಸರ್ಕಾರದ ಯೋಜನೆಗಳ ತರಬೇತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು ಇಂತಹ ಅವಕಾಶಗಳನ್ನು ಕಳೆದುಕೊಳ್ಳದೇ ಎಲ್ಲ ಕ್ಷೇತ್ರಗಳಲ್ಲೂ ವಿಶಿಷ್ಟ ಸಾಧನೆ ಮಾಡಬೇಕು. ಐಸಿಸಿ ಸಂಸ್ಥೆ 15 ವರ್ಷಗಳಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಮಹಿಳೆಯರಿಗೆ ತಾಂತ್ರಿಕ ಶಿಕ್ಷಣ ನೀಡುತ್ತ ಬರುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ ಹಾನಗಲ್ಲ ತಾಲೂಕು ವಿಪ್ರ ಮಹಿಳಾ ಸಮಾಜದ ಗೌರವಾಧ್ಯಕ್ಷೆ, ಕವಿಯಿತ್ರಿ ಪಾರ್ವತಿಬಾಯಿ ಕಾಶೀಕರ, ಉಷಾಬಾಯಿ ಪೋತದಾರ, ಸಂಸ್ಥೆಯ ಸಹ ಶಾಖಾಧಿಕಾರಿ ಶ್ರೀರಕ್ಷಾ ಪೋತದಾರ, ಐಸಿಸಿ ವಿದ್ಯಾರ್ಥಿನಿಯರಾದ ಭಾರ್ಗವಿ ಪುರೋಹಿತ, ರಂಜಿತಾ ಕಂಕಾಳೆ, ಕೀರ್ತಿ ಬಂಕಾಪುರ ಮುಂತಾದವರು ಮಾತನಾಡಿದರು. ಶಾಖಾಧಿಕಾರಿ ರವಿ ಪೋತದಾರ ಸ್ವಾಗತಿಸಿದರು. ಕೀರ್ತಿ ಬಂಕಾಪುರ ನಿರ್ವಹಿಸಿದರು. ಪೂರ್ಣಿಮಾ ಚಿಗಳ್ಳಿ ವಂದಿಸಿದರು.  

---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement