ರಾಣಿಬೆನ್ನೂರು: ನಮೋ ಟೀ ಸ್ಟಾಲ್ ಉದ್ಘಾಟನೆ
ರಾಣಿಬೆನ್ನೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ನವರಿಗಿಲ್ಲವೆಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣಕುಮಾರ ಅಂಗಡಿ ಹೇಳಿದರು.
ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರು ಆರಂಭಿಸಿರುವ ನಮೋ ಟೀ ಸ್ಟಾಲ್ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚಹಾ ವಿತರಿಸಿ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯಗೊಂಡಾಗಿನಿಂದ ಇಲ್ಲಿಯವರೆಗೂ ದೇಶವನ್ನಾಳಿದ ಕಾಂಗ್ರೆಸ್ ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವುದನ್ನು ಬಿಟ್ಟರೆ ಬೇರೆನನ್ನೂ ಸಾಧಿಸಿಲ್ಲವೆನ್ನುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎದುರಿಸುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿವೆ ಎಂದರು.
ನಮೋ ಟೀ ಸ್ಟಾಲ್ ಉದ್ಘಾಟಿಸಿದ ಮಾಜಿ ಶಾಸಕ ಜಿ ಶಿವಣ್ಣ, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಭಾರತಿ ಜಂಬಗಿ, ಮುಖಂಡರಾದ ವಿಶ್ವನಾಥ ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ, ಚೂಳಪ್ಪ ಕಸವಾಳ, ಯುವ ಮುಖಂಡರಾದ ಸಿದ್ದು ಚಿಕ್ಕಬಿದರಿ, ರಾಜು ತಳವಾರ, ಶಿವಯೋಗಿ ಅಸುಂಡಿ, ರಾಜಣ್ಣ ಭಟ್ಟೂರು ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ಮಾತನಾಡಿದರು.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಪಾಟೀಲ, ಕಲ್ಲೇಶ ಬಳಿಗಾರ, ಕುಮಾರ ಬೆನ್ನೂರು, ರಾಘವೇಂದ್ರ ಕುಲಕರ್ಣಿ, ಆರ್ಎಸ್ಎಸ್ನ ಸೂರಜ್ ಭೋತೆ, ಸುನೀಲ ಬೋತೆ, ಸಂತೋಷ ರಾಯ್ಕರ, ಕುಮಾರ ಯಳೆಹೂಳಿ, ಅಜಯ್ ಮಠದ, ಶ್ರೀನಿವಾಸ ಹಳ್ಳಳ್ಳಿ ಇದ್ದರು.