ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗುಡ್ಡಾಪುರದ ದಾನೇಶ್ವರಿ ಪುರಾಣ ಸಂಪನ್ನ

Rashmi Kasaragodu
Updated On : 11 Feb 2014, 11:30 am

ಹಾವೇರಿ:  ತಾಲೂಕಿನ ಸುಕ್ಷೇತ್ರ ಕೋಣನತಂಬಗಿಯಲ್ಲಿ ಶರಣೆ ಗುಡ್ಡಾಪುರದ ದಾನೇಶ್ವರಿಯ ಪುರಾಣವು 21 ದಿನಗಳ ಕಾಲ ನೆರವೇರಿತು. ಪುರಾಣದ ಭಾಗವಾಗಿ ದಾನಮ್ಮ ಮತ್ತು ಸೋಮನಾಥರ ಮದುವೆ ಕೋಣನತಂಬಗಿ ಗ್ರಾಮದ ಭಕ್ತರ ಸಮ್ಮುಖದಲ್ಲಿ ನಡೆಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹವು ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ಪುರಾಣ ಪ್ರವಚನಕಾರರಾದ ಬಸವರಾಜ ಮಹಾಸ್ವಾಮಿಗಳು ಬೆಳ್ಳಟ್ಟಿ ಇವರ ಸಮ್ಮುಖದಲ್ಲಿ ನಡೆದವು. ಗ್ರಾಮದ ಪ್ರಮುಖ ಬೀದಿಯಲ್ಲಿ ದಾನೇಶ್ವರಿಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯುದ್ದಕ್ಕೂ ಭಜನೆ, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಮಕ್ಕಳು, ಮಹಿಳೆಯರು ಕುಂಭ ಹೊತ್ತು ಸಾಗಿದರು. ಈ ಸಂದರ್ಭದಲ್ಲಿ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಅನೇಕ ವರ್ಷಗಳಿಂದ ಶರಣ ಸಂಸ್ಕೃತಿಗೆ ಭಾರತ ಶ್ರೇಷ್ಠವಾಗಿದೆ. ಭಕ್ತರೆಲ್ಲ ದಾನಮ್ಮದೇವಿಯ ಆದರ್ಶಗಳನ್ನು ಅಳವಡಿಸಿಕೊಂಡು ಪ್ರೀತಿಯಿಂದ ಜೀವನ ಸಾಗಿಸಬೇಕು ಎಂದು ನುಡಿದರು. ದುಶ್ಚಟಗಳಿಂದ ಯುವಕರು ದೂರವಿದ್ದು ಉತ್ತಮ ವ್ಯಕ್ತಿತ್ವ, ಚಾರಿತ್ರ್ಯ ಬೆಳೆಸಿಕೊಂಡು ಗ್ರಾಮದ ಏಳ್ಗೆಗಾಗಿ ದುಡಿಯಬೇಕು ಎಂದು ಹೇಳಿದರು. ಜಿ.ಎಸ್. ಕುಲಕರ್ಣಿ ಮಾತನಾಡಿದರು. ಶಿವನಗೌಡ್ರ ಪಾಟೀಲ, ಸಂತಗೂಳಪ್ಪ ಕಡಕೋಳ, ಕುರುವಂತ್ತೆಪ್ಪ ಮಠಪತಿ, ಷಣ್ಮುಖಪ್ಪ ಇಚ್ಚಂಗಿ, ವೀರಣ್ಣ ಇಚ್ಚಂಗಿ, ಬಸಪ್ಪ ಕಳ್ಳಿಮನಿ, ಶೇಖಣ್ಣ ಗೋರಪ್ಪನವರ, ಸಿದ್ಧಪ್ಪ ಬೋಳಕಟ್ಟಿ, ರುದ್ರಗೌಡ ಶಿವನಗೌಡ್ರ, ರಾಮನಗೌಡ ಶಿವನಗೌಡ್ರ, ಮಲ್ಲನಗೌಡ ಪಾಟೀಲ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement