ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ಬಿಜೆಪಿ ಸಮಾವೇಶ: ಪರಿಶೀಲನೆ

Mainashree
Updated On : 12 Feb 2014, 1:46 am

ಹಾವೇರಿ: ಹಾವೇರಿಯಲ್ಲಿ ಫೆ. 13ರಂದು ನಡೆಯಲಿರುವ ಬಿಜೆಪಿ ಸಮಾವೇಶದ ಪೂರ್ವ ಸಿದ್ಧತೆಯನ್ನು ಮಾಜಿ ಶಾಸಕರಾದ ನೆಹರೂ ಓಲೆಕಾರ, ಶಿವರಾಜ ಸಜ್ಜನರ ಇತರರು ಪರಿಶೀಲಿಸಿದರು. ಯಡಿಯೂರಪ್ಪ, ಈಶ್ವರಪ್ಪ, ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ, ಸದಾನಂದ ಗೌಡ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.




15ರಿಂದ ಯುವ ಕಾವ್ಯ ಕಮ್ಮಟ  
ಹಾನಗಲ್ಲ: ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ ಕಾವ್ಯರಚನೆ ಮತ್ತು ಕಾವ್ಯ ಪರಂಪರೆಯ ಕಲಿಕಾ ಯುವ ಕಾವ್ಯ ಕಮ್ಮಟ ಹಾಗೂ ಕವಿಗೋಷ್ಠಿಯು ಫೆ. 15 ಹಾಗೂ 16 ರಂದು ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ನಡೆಯಲಿದೆ. ಯುವ ಕಾವ್ಯ ಕಮ್ಮಟದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತ ಯುವ ಬರಹಗಾರರು ಫೆ. 14ರೊಳಗಾಗಿ  ಶಿಬಿರದ ನಿರ್ದೇಶಕ ಪ್ರೊ. ಮಾರುತಿ (9448630551) ಶಿಡ್ಲಾಪೂರ ಹಾಗೂ ಟಿ. ಶಿವಕುಮಾರ (9902391085) ಇವರಲ್ಲಿ ಹೆಸರು ನೋಂದಾಯಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣಕ್ಕಾಗಿ ಬ್ಲ್ಯಾಕ್ಮೇಲೆ: ಕ್ರಮಕ್ಕೆ ಆಗ್ರಹ
ರಾಣಿಬೆನ್ನೂರು: ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಳ್ಳುತ್ತಿರುವ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ನಿವಾಸಿ ಸಿದ್ಧಾರೂಢ ಗುರುಂ ಸ್ಥಳೀಯ ಗ್ರಾಪಂ ಅಧ್ಯಕ್ಷ, ಸದಸ್ಯರನ್ನು, ನೌಕರರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತ ಗ್ರಾಮಾಭಿವೃದ್ಧಿ ಕಾರ್ಯಗಳಿಗೆ ಸಂಘಟನೆಯ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಪ್ಪ ಬಣಕಾರ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,   ಸಂಘಟನೆಯಿಂದ ಗುರಂನನ್ನು ಕಿತ್ತುಹಾಕಬೇಕೆಂದು ಒತ್ತಾಯಿಸಿದರು. ನ್ಯಾಯವಾದಿ ರವಿಶಂಕರ ಬೆಂಕಿ, ಕುಬೇರಪ್ಪ ವದರರ, ನಿಸ್ಸಾರಅಹ್ಮದ ವಿರಾಪುರ, ರಮೇಶ ಗಂಜಾಮದ, ಮಾಬುಸಾಬ್ ಕಡೂರು, ಐ.ಬಿ. ಹರಿಹರ, ತಿಪ್ಪೇಸ್ವಾಮಿ ಪರಾಳ, ಬಸವರಾಜ ಕಠಾರಿ, ಅಲ್ಲಾಭಕ್ಷ ಹಲಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement