ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದಿನಿಂದ ಚಿಂತನ ಕಮ್ಮಟ

Lingaraj Badiger
Updated On : 13 Feb 2014, 11:06 am

ಹಾನಗಲ್ಲ:  ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ ಮತ್ತು ಗಜಾನನ ಯುವಕ ಮಂಡಳಿ ವತಿಯಿಂದ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಫೆ. 13 ಮತ್ತು 14ರಂದು ಡಾ. ಬೆಟಗೇರಿ ಕೃಷ್ಣಶರ್ಮರ ಕಾವ್ಯಾರ್ಥ ಚಿಂತನ ಎಂಬ ಕಮ್ಮಟ ಉದಾಸಿ ಕಲಾಕ್ಷೇತ್ರದಲ್ಲಿ ಜರುಗಲಿದೆ.
ಕಮ್ಮಟವನ್ನು ಟ್ರಸ್ಟ್‌ನ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ ಉದ್ಘಾಟಿಸುವರು, ಅತಿಥಿಗಳಾಗಿ ಕಾರ್ಯನಿರ್ವಾಹಕ ಅಭಿಯಂತರ ಬಿ.ವೈ. ಬಂಡಿವಡ್ಡರ ಆಗಮಿಸುವರು. ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ತಿಳವಳ್ಳಿಯ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ಎಂ.ಆರ್. ಹೆಗಡೆ ವಹಿಸುವರು. ಮುಕುಂದ ಕುಲಕರ್ಣಿ ಮತ್ತು ನರಸಿಂಹ ಕೋಮಾರ ಉಪನ್ಯಾಸ ನೀಡುವರು. ಮಧ್ಯಾಹ್ನ 2.15ಕ್ಕೆ ಜರುಗುವ ಬೆಟಗೇರಿಯವರ ಕಾವ್ಯಾಧ್ಯಯನ ಗೋಷ್ಠಿಯಲ್ಲಿ ಎಂ.ಎಸ್. ವಿಶ್ವನಾಥ ಮತ್ತು ನಿರ್ಮಲ ಶೆಟ್ಟರ ಉಪನ್ಯಾಸ ನೀಡುವರು. ವಿ.ಪಿ. ಗುರಪ್ಪನವರ ಅಧ್ಯಕ್ಷತೆ ವಹಿಸುವರು. ನಂತರ ವಿಶ್ವನಾಥ ಹಿರೇಮಠ ಮತ್ತು ಪುನೀತ್ ಕಬ್ಬೂರ ಅವರಿಂದ ಗೀತ ಗಾಯನ ಜರುಗುವುದು. ಶುಕ್ರವಾರ ಫೆ. 14ರಂದು ಬೆಳಗ್ಗೆ 10.30ಕ್ಕೆ ಬೆಟಗೇರಿ ಕೃಷ್ಣಶರ್ಮರ ಕವಿತೆಗಳ ವಾಚನವನ್ನು ಕಮ್ಮಟದ ವಿದ್ಯಾರ್ಥಿಗಳು ಮಾಡುವರು. ಅಧ್ಯಕ್ಷತೆಯನ್ನು ಅಕ್ಕಿಆಲೂರ ಸರ್ಕಾರಿ ಪದವಿ ಕಾಲೇಜಿನ ಗುರುದೇವ ವಹಿಸುವರು. ಅತಿಥಿಗಳಾಗಿ ಶ್ರೀನಿವಾಸ ನಾಯಕ ಮತ್ತು ಮಲ್ಲಿಕಾರ್ಜುನ ಕನ್ನೇಶ್ವರ ಆಗಮಿಸುವರು. ಮಧ್ಯಾಹ್ನ 12 ಗಂಟೆಗೆ ಡಾ. ಬೆಟಗೇರಿಯವರ ಮತ್ತಷ್ಟು ಕವಿತೆಗಳ ವಾಚನ ಮತ್ತು ವಿಶ್ಲೇಷಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಾ. ಧರಣೇಂದ್ರ ಕುರಿಕುರಿ ವಹಿಸುವರು. ಜಿ.ಎಂ. ಓಂಕಾರಣ್ಣನವರ, ಕುಮಾರಿ ಸಂಗೀತ ಬೆಳವತ್ತಿ ಎಸ್.ಜೆ. ಚಿತ್ರಗಾರ, ಪ್ರಕಾಶ ಭಾಗವತ್ ಮುಂತಾದ 14 ಕವಿಗಳು ಭಾಗವಹಿಸುವರು. ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಸಮಾರೋಪ ಭಾಷಣವನ್ನು ಖ್ಯಾತ ಕವಿ ಚಂದ್ರಶೇಖರ ವಸ್ತ್ರದ ನೆರವೇರಿಸುವರು. ಅತಿಥಿಗಳಾಗಿ ಹಾನಗಲ್ಲ ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಾಳಿ, ಸಾಹಿತಿ ಮಾರುತಿ ಶಿಡ್ಲಾಪುರ, ಶರಣ ಸಾಹಿತ್ಯ ಪರಿಷತ್ತಿನ ಹನುಮಂತಗೌಡ ಗೊಲ್ಲರ ಮುಂತಾದವರು ಭಾಗವಹಿಸುವರು ಎಂದು ಗಜಾನನ ಯುವಕ ಮಂಡಳಿಯ ಅಧ್ಯಕ್ಷ ಪ್ರಭು ಗುರಪ್ಪನವರ ಮತ್ತು ಶಿಬಿರ ನಿರ್ದೇಶಕ ನಾಗರಾಜ ಧಾರೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement