ರು. 2.55 ಕೋಟಿ ಉಳಿತಾಯ ಬಜೆಟ್
ರಾಣಿಬೆನ್ನೂರು: ಇಲ್ಲಿನ ನಗರಸಭೆಯ ಅಧ್ಯಕ್ಷರಾದ ಶಿವಣ್ಣ ಮಣೇಗಾರ 2013-14ನೇ ಸಾಲಿನ ಪರಿಷ್ಕೃತ ಹಾಗೂ 2014-15ನೇ ಸಾಲಿನ ರು. 2 ಕೋಟಿ 55 ಲಕ್ಷ 91 ಸಾವಿರ ಉಳಿತಾಯ ಬಜೆಟ್ ಮಂಡಿಸಿದರು.
ರು. 1546.86 ಲಕ್ಷ ಆರಂಭಿಕ ಶಿಲ್ಕು ಆಗಿದ್ದು ನಗರ ಸಭೆಯ ಆದಾಯ ಮೂಲಗಳಾದ ಆಸ್ತಿ ತೆರಿಗೆ ರು. 237.06 ಲಕ್ಷ, ಮಳಿಗೆ ಬಾಡಿಗೆ ರು. 221.00 ಲಕ್ಷ, ನೀರಿನ ಕಂದಾಯ ರು. 221.83 ಲಕ್ಷ, ಅಭಿವೃದ್ಧಿ ಕರ ರು. 200.00 ಲಕ್ಷ, ಕಟ್ಟಡ ಪರವಾನಗಿ ರು. 20.00 ಲಕ್ಷ, ವ್ಯಾಪಾರಿ ಪರವಾನಗಿ 10.00 ಲಕ್ಷ, ಎಸ್ಡಬ್ಲುಎಂ ಶುಲ್ಕ ರು. 16.00 ಲಕ್ಷ, ಸಂತೆ ಶುಲ್ಕ ರು. 15.00 ಲಕ್ಷ, ನಳ ಸಂಪರ್ಕ ರು. 15.00 ಲಕ್ಷ, ಆಸ್ತಿ ತೆರಿಗೆ ಮೇಲಿನ ಬಡ್ಡಿ ರು. 25.00 ಲಕ್ಷ, ಜಾಹಿರಾತು ತೆರಿಗೆ ರು. 3.00 ಲಕ್ಷ, ಇತರೆ ಫೀ ಮತ್ತು ಆದಾಯಗಳು ರು. 52.10 ಲಕ್ಷ, ಸೇರಿದಂತೆ ಒಟ್ಟು ರು. 1035.99 ಲಕ್ಷ ನಗರಸಭೆಯ ಸ್ವಂತ ಆದಾಯವಾಗಿವೆ.
ರಾಜಸ್ವ ಅನುದಾನಗಳಾದ ಎಸ್ಎಫ್ಸಿ ವೇತನ ಆನುದಾನ ರು. 292.00 ಲಕ್ಷ, ಎಸ್ಎಫ್ಸಿ ವಿದ್ಯುತ್ ಅನುದಾನ ರು. 282.00 ಲಕ್ಷ, ಎಸ್ಎಫ್ಸಿ ಮುಕ್ತನಿಧಿ ಅನುದಾನ ರು. 643.00 ಲಕ್ಷ, ಎಸ್ಎಫ್ಸಿ ಇತರೆ ಅನುದಾನ ರು. 5.00 ಲಕ್ಷ, ಒಟ್ಟು ರು. 1222.00 ಲಕ್ಷ ಆಗಿದ್ದು, ವಿಶೇಷ ಅನುದಾನದಲ್ಲಿ 13ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ರು. 224.50 ಲಕ್ಷ, ಎಸ್ಜಿಎಸ್ಆರ್ವೈ ಅನುದಾನ ರು. 68.20 ಲಕ್ಷ, ಬರ ಪರಿಹಾರ ಅನುದಾನ ರು. 22.50 ಲಕ್ಷ ಸೇರಿದಂತೆ ಒಟ್ಟು ರು. 315.20 ಲಕ್ಷ, ಅಸಮಾನ್ಯ ಜಮೆಗಳು ರು. 561.67 ಲಕ್ಷ ಒಟ್ಟು ಸ್ವಿಕೃತಿಗಳು ಹಾಗೂ ಆರಂಭಿಕ ಶುಲ್ಕ ಸೇರಿ ರು. 4681.72 ಲಕ್ಷ 2013-14ನೇ ಸಾಲಿನ ಉಳಿತಾಯವಾಗಿರುತ್ತದೆ.
ಪಾವತಿಗಳು-(ಖರ್ಚು) ವೇತನ ಪಾವತಿ ರು. 315.98 ಲಕ್ಷ, ಎಸ್ಡಬ್ಲುಎಂ ಹೊರಗುತ್ತಿಗೆ ಮತ್ತು ಮನೆ ಮನೆ ಕಸ ಸಂಗ್ರಹಣೆ ರು. 171.00 ಲಕ್ಷ, ಬೀದಿದೀಪ ನಿರ್ವಹಣೆ ಹೊರಗುತ್ತಿಗೆ ರು. 35.00 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ರು. 41.00 ಲಕ್ಷ, ನೀರು ಸರಬರಾಜು ವಿದ್ಯುತ್ ಬಿಲ್ ರು. 210.00 ಲಕ್ಷ, ಬೀದೀ ದೀಪ ವಿದ್ಯುತ್ ಬಿಲ್ ರು. 90.00 ಲಕ್ಷ, ದಾಸ್ತಾನು ಖರೀದಿ ರು. 73.00 ಲಕ್ಷ, ರಿಪೇರಿ ಮತ್ತು ನಿರ್ವಹಣೆ ರು. 71.00 ಲಕ್ಷ, ಕಚೇರಿ ವೆಚ್ಚಗಳು ಮತ್ತು ಇತರೆ ನಿರ್ವಹಣೆಯ ವೆಚ್ಚಗಳು ರು. 149.60 ಲಕ್ಷ, ಪಜಾ, ಪಪಂ ಅಭಿವೃದ್ಧಿ ರು. 175.00 ಲಕ್ಷ, ಇತರೆ ಬಡ ಜನರ ಅಭಿವೃದ್ಧಿ ರು. 55.90 ಲಕ್ಷ, ವಿಕಲಚೇತನರ ಅಭಿವೃದ್ಧಿ ರು. 23.20 ಲಕ್ಷ, ಎಸ್ಜಿಎಸ್ವೈ ಯೋಜನಾ ವೆಚ್ಚ ರು. 68.20 ಲಕ್ಷ, ವಂತಿಕೆಗಳು ರು. 10.00 ಲಕ್ಷ ಸೇರಿದಂತೆ ಒಟ್ಟು ರು. 1488.88 ಲಕ್ಷ ಮತ್ತು ಬಂಡವಾಳಗಳ ಪಾವತಿಗಳು ರಸ್ತೆಗಳ ಅಭಿವೃದ್ಧಿಗೆ ರು. 399.51 ಲಕ್ಷ, ರಸ್ತೆ ಬದಿ ಚರಂಡಿಗಳ ನಿರ್ವಹಣೆಗಾಗಿ ರು. 820.87 ಲಕ್ಷ, ಬೀದಿ ದೀಪ ವ್ಯವಸ್ಥೆಗಾಗಿ ರು. 173.51 ಲಕ್ಷ, ಮಳೆ ನೀರು ಚರಂಡಿ ಸೇರುವಂತೆ ವ್ಯವಸ್ಥೆ ಮಾಡುವುದಕ್ಕಾಗಿ ರು. 15.00 ಲಕ್ಷ, ಸಾರ್ವಜನಿಕ ಸುಲಭ ಶೌಚಾಲಯಗಳ ನಿರ್ಮಾಣಕ್ಕಾಗಿ ರು. 51.77 ಲಕ್ಷ, ಸ್ಮಶಾನ ಅಭಿವೃದ್ಧಿಗಾಗಿ ರು. 5.00 ಲಕ್ಷ, ಎಸ್ಡಬ್ಲುಎಂ ಸಂಬಂಧಿ ವೆಚ್ಚಗಳು ರು. 351.87 ಲಕ್ಷ, ನೀರು ಸರಬರಾಜಿಗಾಗಿ ರು. 311.79 ಲಕ್ಷ, ಯುಜಿಡಿ ನಿರ್ವಹಣೆಗಾಗಿ ರು. 25.00 ಲಕ್ಷ, ಮಾರುಕಟ್ಟೆ ಅಭಿವೃದ್ಧಿಗಾಗಿ ರು. 3.50 ಲಕ್ಷ, ಪಾರ್ಕ್ಗಳ ಅಭಿವೃದ್ಧಿಗಾಗಿ ರು. 140.16 ಲಕ್ಷ, ಕಚೇರಿ ಕಟ್ಟಡಗಳ ನಿರ್ವಹಣೆಗಾಗಿ ರು. 24.68 ಲಕ್ಷ, ವಾಣಿಜ್ಯ ಮಳಿಗೆಗಳ ನಿರ್ವಹಣೆಗಾಗಿ ರು. 10.70 ಲಕ್ಷ, ಇತರೆ ಬಂಡವಾಳ ಉಳಿತಾಯಕ್ಕಾಗಿ ರು. 32.00 ಲಕ್ಷ ಸೇರಿದಂತೆ ಒಟ್ಟು ರು. 2365.36 ಲಕ್ಷಗಳನ್ನು ಮತ್ತು ರು. 571.57 ಲಕ್ಷ ಅಮಾನ್ಯ ಪಾವತಿ, ಒಟ್ಟು ರು. 4425.81 ಲಕ್ಷ ಪಾವತಿಗಳು ಸೇರಿ ರು. 2 ಕೋಟಿ 55 ಲಕ್ಷ 91 ಸಾವಿರ, 2013-14ನೇ ಆಯವ್ಯಯ ಸೇರಿದಂತೆ 2014-15ನೇ ಸಾಲಿನ ಉಳಿತಾಯ ಬಜೆಟ್ಟಾಗಿರುತ್ತದೆ ಎಂದು ನಗರಸಭೆಯ ಅಧ್ಯಕ್ಷ ಶಿವಣ್ಣ ಮಣೇಗಾರ ಬಜೆಟ್ ಮಂಡಿಸಿದರು.
ಶಾಸಕ ಕೆ.ಬಿ. ಕೋಳಿವಾಡ, ನಗರಸಭೆ ಪೌರಾಯುಕ್ತ ಅಶ್ವಿನಿ ಬಿ.ಎಂ, ನಗರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ನೂರುಲ್ಲಾ ಖಾಜಿ, ರಾಮಣ್ಣ ಕೂಲಕಾರ, ಶೇಖಪ್ಪ ಹೊಸಗೌಡ್ರ, ಪ್ರಭುಸ್ವಾಮಿ ಕರ್ಜ್ಜಗಿಮಠ, ಪುಟ್ಟಪ್ಪ ಮರಿಯಮ್ಮನವರ, ರತ್ನಾ ಪುನೀತ ಚರ್ಚಿಸಿದರು.