ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮನೆಗೆ ಬೆಂಕಿ: ಅಪಾರ ಹಾನಿ

Vishwanath S
Updated On : 15 Feb 2014, 1:09 am

ಹಿರೇಕೆರೂರು:  ತಾಲೂಕಿನ ಚಿಕ್ಕೋಣಿತಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದಾಗಿ ಮನೆಗೆ ಬೆಂಕಿ ಆವರಿಸಿ ಸುಮಾರು ರು. 2 ಲಕ್ಷ ಹಾನಿ ಸಂಭವಿಸಿದೆ.
ಗ್ರಾಮದ ಸತ್ತರಸಾಬ್ ಸಾತೇನಹಳ್ಳಿ ಎಂಬುವರ ಮನೆಯ ಮೇಲೆ ಹಾದು ಹೋಗಿರುವ ಹೈ ಪವರ್‌ನ ವಿದ್ಯುತ್ ತಂತಿ ತುಂಡಾಗಿ ಮನೆಗೆ ಸಂಪರ್ಕ ಕಲ್ಪಿಸುವ ತಂತಿಯ ಮೇಲೆ ಹರಿದು ಬಿದ್ದ ಪರಿಣಾಮ ಬೆಂಕಿ ಹೊತ್ತಿ ಮನೆಯಲ್ಲಿರುವ ಬಹುತೇಕ ಸಾಮಗ್ರಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ ಗ್ರಾಮದಲ್ಲಿರುವ 30ಕ್ಕೂ ಹೆಚ್ಚು ಟಿವಿಗಳು ಸುಟ್ಟುಹೋಗಿವೆ. ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಧಿಕ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಣಿತಿ ಗ್ರಾಮಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಹೆಸ್ಕಾಂನ ಎಂ.ಡಿ. ರಾಜೇಂದ್ರ ಚೋಳನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯುತ್ ತಂತಿದುರಸ್ತಿಗೊಳಿಸಿ, ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸೂಚಿಸಿದರು. ರು. 50 ಸಾವಿರ ಮೊತ್ತದ ಚೆಕ್ ಹಾನಿಗೊಳಗಾದವರಿಗೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement