ಸಮ್ಮೇಳನ ಹಾವೇರಿಯಲ್ಲೇ ನಡೆಸಿ: ಮನವಿ
ಹಾವೇರಿ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿಯೇ ನಡೆಸಬೇಕೆಂದು ಒತ್ತಾಯಿಸಿ ಸಂಸದ ಶಿವಕುಮಾರ ಉದಾಸಿಯವರಿಗೆ ನವ ಕರ್ನಾಟಕ ನಿರ್ಮಾಣ ವೇದಿಕೆ ಮನವಿ ಸಲ್ಲಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿಯೇ ನಡೆಸಬೇಕು. ಕಸಾಪ ಜಿಲ್ಲಾಧ್ಯಕ್ಷರು ತಮ್ಮ ಸ್ವಉದ್ದೇಶಕ್ಕಾಗಿ ರಾಣಿಬೆನ್ನೂರಿನಲ್ಲಿಯೇ ಸಮ್ಮೇಳನ ನಡೆಸಲು ನಿರ್ಧರಿಸಿದ್ದಾರೆ. ಇದನ್ನು ವೇದಿಕೆ ವಿರೋಧಿಸುತ್ತದೆ. ಒಂದು ವೇಳೆ ಸಮ್ಮೇಳನವನ್ನು ರಾಣಿಬೆನ್ನೂರಿನಲ್ಲಿ ನಡೆಸುವುದಾದರೆ ವೇದಿಕೆಯು ರಾಜ್ಯಾದ್ಯಂತ ಹಾಗೂ ಹಾವೇರಿಯಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಟಿಕೇಹಳ್ಳಿ, ನಗರಾಧ್ಯಕ್ಷ ಶಿವಬಸವ ಬಣಕಾರ, ನಗರ ಕಾರ್ಯದರ್ಶಿ ನವೀನ ಅಪ್ಪಾಜಿ, ನಗರ ಸಂಚಾಲಕರ ದ್ವಾರ್ಕುಸ್ವಾಮಿ ಮಳಿಮಠ, ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರದೀಪ ಲಂಬಿ, ನಗರ ಸಹಸಂಚಾಲಕರು ನಿಖಿಲ ಕೊರಡೂರ, ನವೀನ ಛಲವಾದಿ, ಗಂಗಾಧರ ಅಕಳಂಡಸ್ವಾಮಿಮಠ, ಶ್ರೀಧರ ಹಿರೇಮಠ, ಶಿವಾನಂದ ದೇವರವರ, ಶಿವಬಸವ ಬಣಕಾರ ಇತರರು ಇದ್ದರು.