ಸಾವಿತ್ರಿಬಾಯಿ ನರೇಗಲ್ ನಿಧನ
ಹಾನಗಲ್ಲ: ಪಟ್ಟಣದ ಪಾರಂಪರಿಕ ಪ್ರಸೂತಿ ತಜ್ಞೆಯಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಸಾವಿತ್ರಿಬಾಯಿ ಕೃಷ್ಣರಾವ್ ನರೇಗಲ್ (85) ಶುಕ್ರವಾರ ನಿಧನರಾದರು. ಮೃತರು ತಮ್ಮ ಜೀವಿತಾವಧಿಯಲ್ಲಿ ನೂರಾರು ಮಹಿಳೆಯರಿಗೆ ಮನೆಯಲ್ಲೇ ಸುರಕ್ಷಿತ ಹೆರಿಗೆ ಮಾಡಿಸುತ್ತಿದ್ದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳಿದ್ದಾರೆ. ಸಾವಿತ್ರಿಬಾಯಿ ಅವರ ನಿಧನಕ್ಕೆ ಹಾನಗಲ್ಲ ತಾಲೂಕು ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ.