ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾವ್ಯಕ್ಕೆ ಭಾವನೆಗಳನ್ನು ತುಂಬುವ ಶಕ್ತಿ ಕವಿಗಿದೆ

Mainashree
Updated On : 17 Feb 2014, 10:19 am

ಹಾನಗಲ್ಲ: ಅಧ್ಯಾತ್ಮ, ಅಂತರಂಗ ಬಹಿರಂಗದ ಭಾವದ ನಂಟುಗಳನ್ನು ಕಾವ್ಯಗಳಲ್ಲಿ ಕಟ್ಟುವ ಶಕ್ತಿವಂತನೆ ಕವಿ ಎಂದು ಜಮಖಂಡಿಯ ಕವಯಿತ್ರಿ ಶಾರದಾ ಮುಳ್ಳೂರ ನುಡಿದರು.
ಹಾನಗಲ್ಲ ತಾಲೂಕಿನ ಅರಳೇಶ್ವರಲ್ಲಿ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಕಾವ್ಯ ರಚನೆ ಮತ್ತು ಕಾವ್ಯ ಪರಂಪರೆಯ ಕಲಿಕಾ ಎರಡು ದಿನಗಳ ಯುವಕಾವ್ಯ ಕಮ್ಮಟದಲ್ಲಿ ಅವರು ಸಮಾರೋಪ ಮಾತುಗಳನ್ನಾಡಿದರು.
ನೋವಿನ ಅಭಿವ್ಯಕ್ತಿ ಕಾವ್ಯದಲ್ಲಿ ಮುಕ್ತವಾಗಿ ಮೂಡುವುದರ ಜತೆಗೆ ಸಂತಸದ ಸಂದರ್ಭಗಳು ಕಾವ್ಯವಾಗಿ ಮೂಡುತ್ತವೆ. ಕವಿ ಮನಸ್ಸು ಸೂಕ್ಷ್ಮವಾಗಿರುವಂಥದ್ದು, ಕವಿ ಭಾವತರಂಗಗಳು ಕಾವ್ಯ ಮೃದಂಗವಾಗಿರುತ್ತವೆ. ಮುಕ್ತತೆ ಹಾಗೂ ಸೂಕ್ಷ್ಮತೆಗಳು ಕವಿಯ ಬರವಣಿಗೆಯಲ್ಲಿರಬೇಕು ಎಂದ ಅವರು, ಕವಿ ಹೇಳುವುದನ್ನು ಜಗತ್ತೆ ನಂಬುತ್ತದೆ. ಆದ್ದರಿಂದ ಒಳ್ಳೆಯದು ಸರಿಯಾಗಿರುವುದನ್ನೇ ಕವಿ ಹೇಳಬೇಕು ಎಂದರು.
ಕಾವ್ಯದ ತುಡಿತ ಹಂಬಲ ಕವಿಯನ್ನು ಶೋಧಕ್ಕೊಳಪಡಿಸಿ ಕೊರತೆಗಳನ್ನು ನೀಗಿಸುತ್ತದೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ ಬದುಕಿನ ಸೂಕ್ಷ್ಮಗಳನ್ನು ಅರಿವ ಶಕ್ತಿ ಕವಿಗಿದೆ. ಕಾವ್ಯಕ್ಕೆ ಸ್ತ್ರೀ ಪುರುಷನೆಂಬ ಭೇದವಿಲ್ಲ. ಸೃಜನಶೀಲರಾದವರು ಸಹೃದಯತೆ ಉಳ್ಳವರು ಕವಿಯಾಗಬೇಕು ಎಂದರು.
ಸಮಾರೋಪದ ಅಧ್ಯಕ್ಷತೆಯನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ ವಹಿಸಿದ್ದರು. ಇದೇ ಸಂದರ್ಭ ಕವಯಿತ್ರಿ ಶಾರದಾ ಮುಳ್ಳೂರ ಅವರನ್ನು ಸನ್ಮಾನಿಸಲಾಯಿತು. ಗೋಕಾಕ ಟ್ರಸ್ಟ್‌ನ ಕಾರ್ಯಕಾರಿ ಸದಸ್ಯ ಸತೀಶ ಕುಲಕರ್ಣಿ, ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರೊ. ವಿ.ಎಲ್. ಪಾಟೀಲ, ಅರಳೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎ.ಎಸ್. ಜಗದೀಶಪ್ಪ, ಲೇಖಕ ಟಿ. ಶಿವಕುಮಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಸಿ. ಕೊಟ್ರೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement