ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

Mainashree
Updated On : 18 Feb 2014, 10:30 am

ಗುತ್ತಲ:  ಮಕ್ಕಳಿಗೆ ಶಿಕ್ಷಣ ಬೋಧಿಸುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು.
ಸ್ಥಳೀಯ ಹೇಮಗಿರಿ ಹಿರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಕೇವಲ ಶಿಕ್ಷಣದಿಂದಲೇ ಮನುಷ್ಯನ ಬದುಕು ಹಸನಾಗುವುದಿಲ್ಲ, ಶಿಕ್ಷಣದೊಂದಿಗೆ ಸಂಸ್ಕಾರ ಅಷ್ಟೇ ಮಹತ್ವವನ್ನು ಪಡೆದಿದೆ ಎಂದರು. ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಬೇಕೆಂದರು.
ಜಿಜಿಇ ಸೊಸೈಟಿಯ ಗೌರವ ಕಾರ್ಯದರ್ಶಿ ಸಿ.ಬಿ. ಕುರವತ್ತಿಗೌಡ್ರ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಅಡಕವಾಗಿರುತ್ತದೆ. ಆ ಪ್ರತಿಭೆಯನ್ನು ಹೊರಹಾಕಲು ಗುರುವಿನ ಅವಶ್ಯಕತೆ ಇದೆ ಎಂದರು. ವಿಜ್ಞಾನವಸ್ತು ಪ್ರದರ್ಶನದಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಪಂ ಸದಸ್ಯ ವಸಂತ ಕಳಸಣ್ಣನವರ, ತಾಪಂ ಸದಸ್ಯ ಶಿವಪ್ಪ ತೋಟದ, ಶಾಲೆಯ ಉಪಾಧ್ಯಕ್ಷ ಎಂ.ಎನ್. ಶಿತಾಳದ, ಗುರುಪಾದಪ್ಪ ವಿಭೂತಿ, ಶಂಕ್ರಪ್ಪ ಚಕ್ಕಿ, ನಿಂಗಪ್ಪ ಶಿತಾಳದ, ಕೋಟ್ರಯ್ಯ ಕೋವಳ್ಳಿಮಠ ಉಪಸ್ಥಿತರಿದ್ದರು.
ಪ್ರದೀಪ ಸಾಲಗೇರಿ ಸ್ವಾಗತಿಸಿದರು. ಸುರೇಶ ದೇವಳೆ ನಿರೂಪಿಸಿದರು. ಹೇಮಾ ಕುರುವತ್ತಿಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement