ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಗನವಾಡಿಗೆ ನೇಮಕ: 21ರಂದು ಪ್ರತಿಭಟನೆ

Vishwanath S
Updated On : 19 Feb 2014, 11:09 am

ರಾಣಿಬೆನ್ನೂರು: ತಾಲೂಕಿನ ಬೆನಕನಕೊಂಡ ಗ್ರಾಮದ ಪ್ಲಾಟ್ನಲ್ಲಿರುವ 5ನೇ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯರನ್ನು ಹೊರತುಪಡಿಸಿ ಬೇರೆ ಊರಿನ ಅಂಗನವಾಡಿ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡುವ ಮೂಲಕ ನೇಮಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಫೆ. 21ರಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ತೆರವಾಗಿರುವ ಬೆನಕನಕೊಂಡ ಗ್ರಾಮದ 5ನೇ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯನ್ನು ನೇಮಿಸಿಕೊಳ್ಳಬೇಕಾಗಿದ್ದ ಸಮಯದಲ್ಲಿ ಗ್ರಾಮಸ್ಥರಾಗಿರುವ ಅಂಗವಿಕಲರನ್ನಾಗಲಿ, ಅಲ್ಪಸಂಖ್ಯಾತರನ್ನಾಗಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನಿರ್ಗತಿಕರನ್ನಾಗಲಿ, ವಿಧವೆಯರಿಗಾಗಲಿ ನೇಮಕಾತಿಯಲ್ಲಿ ಅವಕಾಶ ನೀಡಬೇಕು. ಆದರೆ, ಬೇರೆ ಗ್ರಾಮದ ಮಹಿಳೆಗೆ ಇಲಾಖೆಯ ಅಧಿಕಾರಿಗಳು ಅವಕಾಶ ನೀಡುವುದರೊಂದಿಗೆ ಮೇಲಧಿಕಾರಿಗಳು ಬೆನಕನಕೊಂಡ ಗ್ರಾಮದ ವಿದ್ಯಾವಂತ ನಿರುದ್ಯೋಗಿ ಮಹಿಳೆಯರಿಗೆ ಮೋಸವೆಸಗಿರುವ ಕಾರಣ ಆಯ್ಕೆಯನ್ನು ವಿರೋಧಿಸಿ ಅಂದು ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement