ಕಡೂರು ಗ್ರಾಮದಲ್ಲಿ ಅದ್ಧೂರಿ ದೇವಿ ಜಾತ್ರೆ
ಹಿರೇಕೆರೂರು: ತಾಲೂಕಿನ ಸುಕ್ಷೇತ್ರ ಕಡೂರ ಗ್ರಾಮದಲ್ಲಿನ ಶ್ರೀ ದುರ್ಗಾದೇವಿ, ಕರಿಯಮ್ಮ ದೇವಿ, ಹಾಗೂ ಶ್ರೀ ಮಾತಂಗೆಮ್ಮ ದೇವಿಯ ಜಾತ್ರಾಮಹೋತ್ಸವ ಭಾರಿ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಜರುಗುತ್ತಿದೆ.
31 ವರ್ಷಗಳಿಂದ ನಡೆದಿರದ ಈ ಜಾತ್ರೆಯನ್ನು ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು, ಇದರಿಂದಾಗಿ ಕಡೂರ ಜಾತ್ರೆ ಈ ಭಾಗದಲ್ಲಿ ಬಹು ಮಹತ್ವ ಪಡೆದಿದೆ. ಗ್ರಾಮದ ಬಡಿಗೇರ ಮನೆಯಿಂದ ಹೊರಟ ದೇವಿ ಮೆರವಣಿಗೆ ಡೊಳ್ಳು ವಿವಿಧ ವಾದ್ಯಗಳೊಂದಿಗೆ ಭಾರಿ ಜನಸಂದಣಿಯಲ್ಲಿ ಸಂಜೆ ಮಂಗಳವಾರ 6ಕ್ಕೆ ಟ್ರ್ಯಾಕ್ಟರ್ನಲ್ಲಿ ವೈಭವದಿಂದ ಅರಂಭಗೊಂಡಿತು. ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸುಣ್ಣ ಬಣ್ಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಗ್ರಾಮದ ಎಲ್ಲ ಕಡೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸ್ವಾಗತ ಕೋರುತ್ತಿರುವ ಯುವಕರ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ. ಗ್ರಾಮದ ಜನತೆ ತಮ್ಮ ಮನೆಗಳಿಗೂ ಸುಣ್ಣ, ಬಣ್ಣ ಹಚ್ಚಿ ಶೃಂಗರಿಸಿದ್ದಾರೆ. ಇತ್ತ ಗ್ರಾಪಂ ವಿವಿಧ ಬೀದಿಗಳಲ್ಲಿ ಸ್ವಚ್ಛತೆ ಹಾಗೂ ನೀರಿನ ಸುವ್ಯವಸ್ಥೆಯನ್ನು ಪೂರ್ಣಗೊಳಿಸಿದೆ. ಇದರಿಂದಾಗಿ ಕಡೂರ ಗ್ರಾಮ ಹಿರೇಕೆರೂರ ತಾಲೂಕಿನ ಜಾತ್ರೆಗಳಲ್ಲಿ ವಿಶೇಷತೆ ಪಡೆದಿದೆ. ರಟ್ಟಿಹಳ್ಳಿ ಪಿಎಸ್ಐ ವೈ. ಶಿಲ್ಪಾರವರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.