ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಯಂತ್ಯುತ್ಸವದಲ್ಲಿ ಸಂಗೀತ ರಸದೌತಣ

Vishwanath S
Updated On : 19 Feb 2014, 11:10 am

ಹಾನಗಲ್ಲ:  ಗಾನಯೋಗಿ ಲಿಂ.ಪಂ. ಪಂಚಾಕ್ಷರಿ ಶಿವಯೋಗಿಗಳವರ 123ನೇ ಜಯಂತ್ಯುತ್ಸವನ್ನು ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಅಹೋರಾತ್ರಿ ಎರಡು ದಿನಗಳ ಕಾಲ ನಾಡಿನ ಹೆಸರಾಂತ ಕಲಾವಿದರು ಸಂಗೀತ ರಸದೌತಣ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಂ.ಎಂ. ವೆಂಕಟೇಶಕುಮಾರ, ಪಂ. ಬಸವರಾಜ ಹೆಡಿಗ್ಗೊಂಡ, ಡಾ. ಮೃತ್ಯುಂಜಯ ಅಗಡಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಅರ್ಜುನ ವಠಾರ, ಶಿವಬಸಯ್ಯ ಚರಂತಿಮಠ, ಎಚ್.ಪಿ. ವೆಂಕಟೇಶ, ರಮ್ಯಾ ಹಾಗೂ ರೇಶ್ಮಾ ಭಟ್ ಸಹೋದರಿಯರು, ವಿನಾಯಕ ಹುಗ್ಗಣ್ಣನವರ, ಪ್ರೊ. ಅಶೋಕ ಹುಗ್ಗನ್ನನವರ, ಪಂ. ರಘುನಾಥ ನಾಕೋಡ, ಡಾ. ರವಿಕಿರಣ ನಾಕೋಡ, ವಿದುಷಿ ರೇಣುಕಾ ನಾಕೋಡ, ಶಂಕರ ಕಬಾಡಿ, ಪ್ರೊ. ಕಿರಣಕುಮಾರ ಹಾನಗಲ್ಲ, ಶಿವಬಸಯ್ಯ ಗಡ್ಡದಮಠ ಮತ್ತಿತರ ಕಲಾವಿದರು ನೀಡಿದ ಸಂಗೀತ ಕಾರ್ಯಕ್ರಮ, ಹಾಡುಗಳು ಜನರ ಮನಸೆಳೆದವು. ಕಾರ್ಯಕ್ರಮದಲ್ಲಿ ಸಮರ್ಥವಾಗಿ ತಬಲಾಸಾಥ್ ನೀಡಿದವರು ಪ್ರೊ. ಹನುಮಂತಕುಮಾರ ಕೊಡಗಾನೂರ, ಅಲ್ಲಮಪ್ರಭು ಕಡಕೋಳ, ಮುತ್ತಣ್ಣ ಮೂಲಿಮನಿ. ಕಲಾವಿದರಾದ ವಿರೂಪಾಕ್ಷ ಪಟ್ಟದಕಲ್, ಸುಕ್ರುಸಾಬ, ಅಜ್ಜಯ್ಯಸ್ವಾಮಿ ಅಡ್ನುರ ಹಾರ್ಮೋನಿಯಂ ಸಾಥ ನೀಡಿದರು. ಒಟ್ಟಾರೆ 2 ದಿನಗಳ ಕಾಲ ಅಹೋರಾತ್ರಿ ಸಂಗೀತದ ಝೇಂಕಾರ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಗೀತ ಲೋಕವನ್ನೆ ಧರೆಗಿಳಿಸಿದಂತಿತ್ತು.
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಹಾವೇರಿ:  ರಸ್ತೆಯಲ್ಲಿ ಸಿಕ್ಕ ಬ್ಯಾಗ್ನಲ್ಲಿದ್ದ ರು. 1 ಲಕ್ಷವನ್ನು ಅದರ ಮಾಲೀಕರಿಗೆ ಮರಳಿಸುವ ಮೂಲಕ ನಗರದ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಇಲ್ಲಿಯ ರೇವಣಕರ ಮಾರುತಿ ಮೋಟರ್ಸ್ ಸಿಬ್ಬಂದಿ, ಅಶ್ವಿನಿ ನಗರದ ಸುರೇಶ ನೂಲ್ವಿ ಎಂಬವರು ಬ್ಯಾಂಕ್ಗೆ ಹಣ ಕಟ್ಟಲೆಂದು ಬ್ಯಾಗ್ನಲ್ಲಿ ರು. 1 ಲಕ್ಷ ತೆಗೆದುಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಆದರೆ, ನಗರದ ಶಿವಶಕ್ತಿ ಪ್ಯಾಲೇಸ್ ಹೋಟೆಲ್ ಬಳಿಯ ಹಂಪ್ ಹತ್ತಿರ ಬೈಕ್ಗೆ ಸಿಕ್ಕಿಸಿಕೊಂಡಿದ್ದ ಬ್ಯಾಗ್ ಕೆಳಕ್ಕೆ ಬಿದ್ದಿದೆ. ಬ್ಯಾಗ್ ಬಿದ್ದದ್ದು ತಿಳಿಯದೇ ಸುರೇಶ ನೂಲ್ವಿ ಹಾಗೆಯೇ ಹೊರಟು ಹೋಗಿದ್ದರು. ಬ್ಯಾಂಕಿಗೆ ಹೋಗಿ ನೋಡಿದಾಗ ಬ್ಯಾಗ್ ಇಲ್ಲದಿರುವುದನ್ನು ತಿಳಿದು, ಕಂಗಾಲಾಗಿ ಹಣ ಹುಡುಕತೊಡಗಿದ್ದಾರೆ. ಆದರೆ, ಹಿಂಬದಿಯಿಂದ ಆಟೋ ತರುತ್ತಿದ್ದ ನಾಗರಾಜ ದೇಸೂರು ಹಾಗೂ ಪ್ರಕಾಶ ರಾಜೂರು ಬ್ಯಾಗ್ ಬಿದ್ದದ್ದನ್ನು ನೋಡಿ ಅದರಲ್ಲಿರುವ ರು. 1 ಲಕ್ಷ ಎಣಿಸಿದ್ದಾರೆ. ಬ್ಯಾಗ್ನಲ್ಲಿದ್ದ ಸುರೇಶ ಅವರ ವಿಸಿಟಿಂಗ್ ಕಾರ್ಡ್ ನೋಡಿ ನೇರವಾಗಿ ಮಾರುತಿ ಮೋಟರ್ಸ್ಗೆ ಆಗಮಿಸಿ ಹಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement