ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭರತನಾಟ್ಯ ದ. ಭಾರತದ ಪಾರಂಪರಿಕ ನೃತ್ಯ: ಚನ್ನಪ್ಪ

Vishwanath S
Updated On : 19 Feb 2014, 11:08 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 18
ಭರತನಾಟ್ಯ ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ, ಭರತಮುನಿ ರಚಿಸಿದ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಉಲ್ಲೇಖವಿರುವುದರಿಂದ ಇದಕ್ಕೆ ಭರತ ನಾಟ್ಯ ಎಂದು ಹೆಸರು ಬಂದಿದೆ ಎಂದು ಜೆಸಿಐ ಅಧ್ಯಕ್ಷ ಕೆ.ಬಿ. ಚನ್ನಪ್ಪ ಹೇಳಿದರು.
ಪಟ್ಟಣದ ಗುರುಭನದಲ್ಲಿ ಜರುಗಿದ ಸುಜನಿ ನಾಟ್ಯ ಶಾಲೆಯ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಜನರ ಮನ್ನಣೆ ಗಳಿಸಿದ ಪ್ರಮುಖ ಕಲೆಯಾಗಿ ಭರತನಾಟ್ಯ ಕಲೆ ಬೆಳೆದು ದೇಶದ ಸಾಂಸ್ಕೃತಿಕ ಕಲೆಯಲ್ಲಿ ಈ ನಾಟ್ಯ ಒಂದಾಗಿ ಬೆಳೆದು ಬಂದಿದೆ ಎಂದರು.
ಶಿಗ್ಗಾಂವಿ ಪಟ್ಟಣದಲ್ಲಿ ಭರತನಾಟ್ಯ ಶಾಲೆ ಪ್ರಾರಂಭವಾಗಿ ಪಟ್ಟಣಕ್ಕೆ ಅಷ್ಟೇ ಅಲ್ಲ ಗ್ರಾಮೀಣ ಮಕ್ಕಳಿಗೂ ಅನುಕೂಲವಾಗಿಸಿದೆ. ಈ ಕಲೆಯಿಂದ ಮಕ್ಕಳಲ್ಲಿ ಸ್ಥಿತಪ್ರಜ್ಞೆ, ತಾಳ್ಮೆ, ಸಂಯಮಗಳಂತ ಗುಣಗಳು ಹಾಗೂ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಸ್ಜೆವಿ ಕಾಲೇಜಿ ಪ್ರಾಚಾರ್ಯ ಸಿ.ಎಸ್. ತಾವರಗುಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ದೈಹಿಕವಾಗಿ ಸದೃಢವಾಗಿ, ಮಾನಸಿಕವಾಗಿ, ಆರೋಗ್ಯವಂತರಾಗಿರಬೇಕಾದರೆ ಭರತ್ ನಾಟ್ಯಗಳಂತ ಕಲೆಗಳನ್ನು ಕಲೆಗತ ಮಾಡಿಕೊಂಡಾಗ ಆರೋಗ್ಯ ಶುದ್ಧವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರಗೌಡ್ರ ಪಾಟೀಲ್ ವಹಿಸಿದ್ದರು. ಮಾಮ್ಲೆದೇಸಾಯಿ ಕಾಲೇಜಿ ಪ್ರಾಚಾರ್ಯ ಜಿ.ಎನ್. ಯಲಿಗಾರ ಮಾತನಾಡಿದರು.
ಸುಜನಿ ನಾಟ್ಯ ಶಾಲೆಯ ವಿದುಷಿ ಗುರುಮಾತೆ ಸುನಿತಾ ಜಗನ್ನಾಥ ವರದಿ ವಾಚನ ಮಾಡಿದರು. ಈ ಸಂದರ್ಭದಲ್ಲಿ ನಾಟ್ಯ ಗುರುಮಾತೆ ಸುನಿತಾ ಜಗನ್ನಾಥ ಅವರಿಗೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ನಂದೀಶ ಯಲಿಗಾರ, ರಾಘವೇಂದ್ರ ದೇಶಪಾಂಡೆ, ಸ್ವಾಗತ ಮತ್ತು ನಿರೂಪಣೆಯನ್ನು ಮಲ್ಲಿಕಾರ್ಜುನ ನೀಲಗುಂದ ನೆರವೇರಿಸಿದರು. ಕೆ.ಎಸ್. ದಳವಾಯಿ ವಂದಿಸಿದರು.
ಭಾರತ ದೇಶದಲ್ಲಿ ಜನರ ಮನ್ನಣೆ ಗಳಿಸಿದ ಪ್ರಮುಖ ಕಲೆಯಾಗಿ ಭರತನಾಟ್ಯ ಕಲೆ ಬೆಳೆದು ದೇಶದ ಸಾಂಸ್ಕೃತಿಕ ಕಲೆಯಲ್ಲಿ ಈ ನಾಟ್ಯ ಒಂದಾಗಿ ಬೆಳೆದು ಬಂದಿದೆ.
- ಕೆ.ಬಿ.ಚನ್ನಬಸಪ್ಪ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement