ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾವಯವ ಗೊಬ್ಬರ ಬಳಕೆ: ಹೆಚ್ಚಿನ ಇಳುವರಿ

Vishwanath S
Updated On : 19 Feb 2014, 11:09 am

ಹಾವೇರಿ:  ಸೂಕ್ಷ್ಮ ಪೋಷಕಾಂಶ ಹಾಗೂ ಸಾವಯವ ಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಪ್ರಗತಿಪರ ರೈತ ಗಣೇಶಪ್ಪ ನಿಂಬೆಗುಂದಿ ಹೇಳಿದರು.
ಹಿರೇಕೆರೂರು ತಾಲೂಕಿನ ಕಳಗೊಂಡ ಗ್ರಾಮದಲ್ಲಿ ನವಭಾರತ ಫರ್ಟಿಲೈಜರ್ಸ್ ಹಾಗೂ ಸ್ಥಳೀಯ ಗ್ರಾಪಂ ಆಶ್ರಯದಲ್ಲಿ ಈಚೆಗೆ ನಡೆದ ಕ್ಷೇತ್ರೋತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಒಂದು ಸಸ್ಯ ಸಂಪೂರ್ಣವಾಗಿ ಬೆಳೆಯಲು ಕೇವಲ ಸಾರಜನಕ, ರಂಜಕ, ಪೋಟ್ಯಾಶ್ಗಳಷ್ಟೇ ಸಾಲದು. ಕ್ಯಾಲ್ಶಿಯಂ, ಮ್ಯಾಗನೀಶಿಯಂ, ಬೇರಾನ್, ಐರನ್ ಇತ್ಯಾದಿ ಸೂಕ್ಷ್ಮ ಪೋಶಕಾಂಶಗಳ ಅಗತ್ಯವಿದೆ. ಇವುಗಳ ಬಳಕೆಯಿಂದ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಇಳುವರಿ ಪಡೆದಿದ್ದೇನೆ ಎಂದು ಹೇಳಿದರು. ನವಭಾರತ ಕಂಪನಿಯ ಶಾಖಾ ವ್ಯವಸ್ಥಾಪಕ ಗುರುಸಿದ್ದಯ್ಯ ಮಾತನಾಡಿ, ರೈತರು ಕೇವಲ ರಾಸಾಯನಿಕ ಗೊಬ್ಬರಗಳಿಗೆ ಮಾತ್ರ ಮೊರೆ ಹೋಗಿ ಭೂಮಿಯ ಫಲವತ್ತತೆ ಹಾಳು ಮಾಡಿಕೊಳ್ಳುವುದರೊಂದಿಗೆ ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಆದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಸಾಕ್ಷ್ಮ ಪೋಷಕಾಂಶಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಮಣ್ಣನ್ನು ಉಳಿಸಿಕೊಳ್ಳುವುದು ರೈತರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರೈತರು ಚಿಂತಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಂಜುನಾಥ, ಬಸವರಾಜ ನಿಂಬೆಗುಂದಿ, ಚಂದ್ರಪ್ಪ ದೊಡಮನಿ, ವೀರೇಶ, ಸಂತೋಷ ಹುಲ್ಲತ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement