ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ

Vishwanath S
Updated On : 20 Feb 2014, 10:50 am

ಹಾನಗಲ್ಲ:   ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಹುಟ್ಟಿ ಬರದಿದ್ದರೆ ಲಿಂಗಾಯತ ಸಮಾಜ ಬಾಂಧವರು ಬಹಳ ಸಂಕಷ್ಟಗಳನ್ನು ಎದುರಿಸಬೇಕಿತ್ತು. ಸಮಾಜ ಸಂಘಟನೆ ಮೂಲಕ ಜನಜಾಗೃತಿ ಮೂಡಿಸಿದ ಕುಮಾರ ಶಿವಯೋಗಿಗಳು ಸದಾ ಸ್ಮರಣೀಯರು ಎಂದು ಸವಣೂರಿನ ಅಡವಿಸ್ವಾಮಿಮಠದ ಕುಮಾರಸ್ವಾಮಿಗಳು ನುಡಿದರು. ನಗರದ ವಿರಕ್ತಮಠದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ನಡೆಯುವ ಲಿಂ. ಕುಮಾರ ಶಿವಯೋಗಿಗಳವರ 84ನೇ ಪುಣ್ಯ ಸ್ಮರಣೋತ್ಸವದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಗತ್ತಿಗೆ ಲಿಂಗಾಯತ ಸಮಾಜದ ಸಂಕೇತವನ್ನು ತೋರಿಸಿಕೊಟ್ಟವರೇ ಗುರು ಕುಮಾರೇಶ್ವರರು. ಅವರ ನಿಸ್ವಾರ್ಥ ಸಮಾಜಸೇವೆ, ಆದರ್ಶ ಜೀವನ ನಮಗೆಲ್ಲರಿಗೂ ಅನುಕರಣೀಯ ಎಂದರು. ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕ ಜಿ.ಎಸ್. ಕೊಂಡೋಜಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಪುರಸಭಾ ಸದಸ್ಯ ಕಲ್ಯಾಣಕುಮಾರ ಶೆಟ್ಟರ, ಪ್ರಕಾಶ ಸಿಂಧೂರ, ಶಿವಯೋಗಿ ಸವದತ್ತಿ, ಎಸ್.ಎಚ್. ಕೋಟಿ, ನಾಗಪ್ಪ ಸವದತ್ತಿ, ವೀರೇಶ ಹುಗ್ಗಿ, ರಾಜಣ್ಣ ಸಿಂಧೂರ, ವೀರೇಶ ಹೆಬ್ಬಳ್ಳಿ, ಶಮಂತ ನ್ಯಾಮತಿ, ಬಿಇಡಿ ಕಾಲೇಜು ಪ್ರಾಚಾರ್ಯ ಎನ್. ಸದಾಶಿವಪ್ಪ, ಡಿಇಡಿ ಕಾಲೇಜು ಪ್ರಾಚಾರ್ಯ ಎ.ಐ. ಮಳೆಣ್ಣನವರ್, ಪಪೂ ಕಾಲೇಜು ಪ್ರಾಚಾರ್ಯ ಟಿ.ಎನ್. ಕಾಮನಹಳ್ಳಿ, ಮಹೇಶ ಅಕ್ಕಿವಳ್ಳಿ, ಆರ್.ಎಸ್. ಹಿರೇಮಠ ಹಾಗೂ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು. ಕುಮಾರೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಎಸ್. ವಸ್ತ್ರದ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement