ವಿಜೃಂಭಣೆಯ ಖಾದ್ರಿ ದರ್ಗಾ ಉರೂಸ್
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹಜರತ್ ಸೈಯದ್ ಅಲ್ಲಾವುದ್ದೀನ ಶಾ ಖಾದ್ರಿ ದರ್ಗಾ ಉರೂಸ್ ಪ್ರತಿ ವರ್ಷದಂತೆ ಈ ಬಾರಿಯು ವಿಜೃಂಭಣೆಯಿಂದ ಜರುಗಿತು.
ಈ ಉರೂಸ್ನಲ್ಲಿ ರಾಜ್ಯಮಟ್ಟದ ಜಂಗ್ಗಿ ಕುಸ್ತಿಗಳು ಜರಗಿದವು. ಪಂದ್ಯವನ್ನು ನೋಡಲು ಸಾವಿರಾರು ಜನ ಸೇರಿದ್ದರು.
ಕೊನೆಯ ಪಂದ್ಯದಲ್ಲಿ ಬಿಜಾಪುರ ತಾಲೂಕಿನ ಇಂಡಿ ಗ್ರಾಮದ ಸೈಕುಲ್ಲಾ ಮತ್ತು ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದ ಶರೀಪ್ ಎಂಬುವರ ಮಧ್ಯೆ ಬಿರುಸಿನ ಪಂದ್ಯ ಜರುಗಿತು.
ಪಂದ್ಯದಲ್ಲಿ ಜಯಗಳಿಸಿದ ಇಂಡಿ ಗ್ರಾಮದ ಸೈಕುಲ್ಲಾಗೆ ಬೆಳ್ಳಿ ಕಡಗವನ್ನು ಅಂಜುಮನ್ ಕಮಿಟಿಯ ಅಧ್ಯಕ್ಷ ಆಯುಬಖಾನ ಪಠಾಣ ನೀಡಿ ಸನ್ಮಾನಿಸಿದರು.
ಬಾಬಾತರಿನ, ಮಹ್ಮದ ರಜಾಕ ಡಾನೇಬಾಗ, ಅಯುಬಖಾನ್ ಪಠಾಣ, ಮಲ್ಲಿಕ್ ಪಟೇಲ್, ಕಲಂದರ ಜಂಗಳಿ, ಖಾಜಾ ಖಲಿಫಾ, ಸಿಕಂದರ ಮತ್ತುರ, ಸಲೀಂ ಗಂಜೇನವರ, ಎಂ.ಎಂ. ಡೊರಳ್ಳಿ, ಮಹ್ಮದ್ ದೊಡಮನಿ, ನಿಸಾರಅಹ್ಮದ್ ದೊಡಮನಿ, ಗೌಸ್ ಪರಾಂಡೆ, ಬಂಕಾಪುರದ ಪಿಎಸ್ಐ ಆರ್.ಎಫ್. ದೇಸಾಯಿ ಇತರರು ಇದ್ದರು.