ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಕ್ಷಕರ ಸಂಘಟನೆ ಬಲಗೊಳಿಸಿ: ಹೊರಟ್ಟಿ

Vishwanath S
Updated On : 23 Feb 2014, 12:37 pm

ಹಿರೇಕೆರೂರು: ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆಗಲಿದ್ದು, ಶಿಕ್ಷಕರು ಮತ್ತಷ್ಟು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೋರಾಟ ಅತಿ ಅಗತ್ಯವಾಗಿದ್ದು ಸಂಘಟನೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಅದ್ದರಿಂದ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಕರೆ ನೀಡಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಶನಿವಾರ ಏರ್ಪಡಿಸಿದ್ದ ಶಾಸಕ ಯು.ಬಿ. ಬಣಕಾರ ಅವರಿಗೆ ಸನ್ಮಾನ, ಸೇವೆಯಿಂದ ನಿವೃತ್ತಿ ಹೊಂದಿದ ಸಂಘದ ಸದಸ್ಯರು, ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಶಿಕ್ಷಕರ ಸಮಸ್ಯೆಗಳಿಗೆ ಅವಿರತವಾಗಿ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ನಿಟ್ಟಿನಲ್ಲಿ 1992ರ ವರೆಗಿನ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡಿಸುವಲ್ಲಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಿವೃತ್ತಿ ವೇತನ ದೊರಕಿಸಿಕೊಟ್ಟಿದ್ದು ಅವಿಸ್ಮರಣೀಯ. ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಬದಲಾವಣೆ ಮಾಡುವಲ್ಲಿ ಸರ್ಕಾರ ಮುಂದಿಡಿ ಇಟ್ಟಿದೆ. ಇದರಿಂದಾಗಿ ಅನೇಕ ಶಿಕ್ಷಕರಿಗೆ ತೊಂದರೆ ಎದುರಾಗಲಿವೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿರುವುದು ಕಳವಳಕಾರಿ ವಿಷಯ. ಈ ನಿಟ್ಟಿನಲ್ಲಿ ಮುಂದಿನ 2020ರ ವೇಳೆಗೆ ಪ್ರತಿಶತ 20ರಷ್ಟು ಶಾಲೆಗಳು ಉಳಿಯಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಶಿಕ್ಷಕರು ಸಂಘಟಿತರಾಗಬೇಕು, ಸಂಘವನ್ನು ಬಲಗೊಳಿಸಬೇಕು ಎಂದರು.
ಶಾಸಕ ಯು.ಬಿ. ಬಣಕಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೋರಾಟದ ಮೂಲಕ ಜೀವನವನ್ನು ಉತ್ತಮಪಡಿಸಲು ಸಾಧ್ಯ. ಶಿಕ್ಷಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅತಿ ಅಗತ್ಯ. ಈ ನಿಟ್ಟಿನಲ್ಲಿ ಸಂಘಟನೆ ಉತ್ತಮ ಪಡಿಸಬೇಕು ಎಂದರು. ನಿವೃತ್ತಿ ಹೊಂದಿದ ಸಂಘದ ಸದಸ್ಯರು, ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸತ್ಕರಿಸಲಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸಾವಜ್ಜಿಯವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ, ನಿವೃತ್ತ ಶಿಕ್ಷಕ ಎಲ್.ಬಿ. ತೆಂಬದ, ತಾಲೂಕು ಘಟಕದ ಉಪಾಧ್ಯಕ್ಷ ಆರ್.ಬಿ. ಹಂಜಿ, ಬಿ.ಎಸ್.ಚಿಕ್ಕೌಡ್ರ, ಕಾರ್ಯದರ್ಶಿ ಬಿ.ಐ. ಲೆಕ್ಕಪ್ಪಳವರ, ಸಹಕಾರ್ಯದರ್ಶಿ ಸಿ.ಕೆ. ಮಾಗನೂರ, ಡಿ. ಭರಮಗೌಡ, ಎಸ್.ಸಿ. ಕಾಡಯ್ಯನವರಮಠ, ಎಸ್.ಬಿ. ಹೊಸಗೌಡ್ರ, ಕೆ.ಎಂ. ಸುಕುಮಾರ, ಜಿ.ಆರ್. ಕೆಂಚಕ್ಕನವರ, ಕೆ.ಎಂ. ಜಯದೇವಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement