ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಹಿರೇಕೆರೂರಿಗೆ ಬಿ.ಎಸ್. ಯಡಿಯೂರಪ್ಪ

Vishwanath S
Updated On : 25 Feb 2014, 11:18 am

ಹಿರೇಕೆರೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಫೆ. 25ರಂದು ಪಟ್ಟಣಕ್ಕೆ ಆಗಮಿಸಿ, ಲೋಕಸಭಾ ಚುನಾಣೆಯ ಹಾಗೂ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಕೋರಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆ ಮತ್ತು ಮುಂದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಚ್ಚಿನ ಬೆಂಬಲ ಒದಗಿಸುವಂತೆ ಕೋರುವ ಸಲುವಾಗಿ ಪಟ್ಟಣಕ್ಕೆ ಆಗಮಿಸುವರು. ಪಟ್ಟಣದ ಕುಲಕರ್ಣಿಯವರ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಜರುಗಲಿದ್ದು ಬೆಳಗ್ಗೆ 10.15ಕ್ಕೆ ಆಗಮಿಸಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಜನತೆಗೆ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಸಭೆಗೆ ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಶಾಸಕ ಯು.ಬಿ. ಬಣಕಾರ, ಶಿವರಾಜ ಸಜ್ಜನರ, ಸೋಮಣ್ಣ ಬೇವಿನಮರದ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕರೂದಿ ಮೊದಲಾದ ನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭ ಜಿಪಂ ಸದಸ್ಯರಾದ ಬಸಮ್ಮ ಅಬಲೂರ, ಪಾರ್ವತಿ ಬೋಗಾವಿ, ಸುಜಾತಾ ಕೊಟಗಿಮನಿ, ಬಸವರಾಜ ಬೇವಿನಹಳ್ಳಿ, ಶಾಂತವ್ವ ಹಾದಿಮನಿ, ಮುಖಂಡರಾದ ಪಾಲಾಕ್ಷಗೌಡ ಪಾಟೀಲ, ಮಹೇಶ ಗುಬ್ಬಿ, ಮಲ್ಲನಗೌಡ ಪುಟ್ಟಪ್ಪಗೌಡ್ರ, ದತ್ತಾತ್ರೆಯ ರಾಯ್ಕರ, ರಾಘವೇಂದ್ರ ಹರವಿಶೆಟ್ಟರ್, ವಿ.ಎಸ್. ಪುರದ, ಶಿವನಗೌಡ ಪಾಟೀಲ, ಸಿದ್ದು ನರೇಗೌಡ್ರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement