ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೈರು: ಸಭೆಗೆ ಸದಸ್ಯರ ಬಹಿಷ್ಕಾರ

Vishwanath S
Updated On : 25 Feb 2014, 11:16 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 24
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಬಂದಿಲ್ಲ. ಪದೇ ಪದೇ ಇದೇ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಸದಸ್ಯರು ಸಭೆ ನಡೆಸದೆ ಹೊರ ನಡೆದ ಪ್ರಸಂಗ ಹಿರೇಕೆರೂರಲ್ಲಿ ಸೋಮವಾರ ಜರುಗಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ ಫೆ. 24ರಂದು ನಿಗದಿಯಾಗಿತ್ತು. ಅದರಂತೆ ಸಭೆಗೆ ತಾಪಂ ಅಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು.
ಆದರೆ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಆದರೆ, ಲೋಕೋಪಯೋಗಿ, ಸಣ್ಣ ನೀರಾವರಿ ತುಂಗಾ ಮೇಲ್ದಂಡೆ, ಹಾಲು ಒಕ್ಕೂಟ, ಎಸ್ಸಿ, ಎಸ್ಟಿ ನಿಗಮ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಗೈರು ಉಳಿದ ಹಿನ್ನೆಲೆಯಲ್ಲಿ ಕುಪಿತರಾದ ಸದಸ್ಯರು ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಕೆಲ ಇಲಾಖೆ ಅಧಿಕಾರಿಗಳು ಸತತವಾಗಿ ಸಭೆಗೆ ಗೈರು ಇದ್ದರೂ ಮೇಲಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.
ಆದ್ದರಿಂದ ಸಭೆಗೆ ಎಲ್ಲ ಸದಸ್ಯರು ಇದ್ದರೂ ಸಹ ಮೇಲಿಂದ ಮೇಲೆ ಗೈರು ಉಳಿಯುವುದರ ಉದ್ದೇಶವೇನು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಅವರನ್ನು ಪ್ರಶ್ನಿಸಿದರು.
ಆಗ ತಾಪಂ ಇಒ ಈಗಾಗಲೇ ಸಭೆಗೆ ಫೆ. 17ರಂದು ನೋಟಿಸ್ ನೀಡಲಾಗಿದೆ. ದೂರವಾಣಿ ಮುಖಾಂತರ ತಿಳಿಸಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಗೈರು ಉಳಿದವರ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಹಾಗೂ ಸೂಕ್ತ ಕ್ರಮ ಜರುಗಿಸಲಾಗುವುದು. ದಯವಿಟ್ಟು ಸಭೆಗೆ ಹಾಜರಾಗಿ ಎಂದರು.
ಆಗ ಸರ್ವ ಸದಸ್ಯರು ಸಭೆ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಆದರೆ, ಹಾಜರಿದ್ದ ಆಧಿಕಾರಿಗಳು ಮಾತ್ರ ಅಲುಗಾಡದೆ ಕುಳಿತಿದ್ದರು. ನಂತರ ಊಟದ ಸಮಯವಾದಾಗ ತಾಪಂ ಕಾರ್ಯನಿರ್ವಾಹಕಾಧಿಕಾರಿಯವರು ಊಟ ಮಾಡಿ ಎಂದಾಗ ಸದಸ್ಯರು ಊಟಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಚಲುವಾದಿ, ಸದಸ್ಯರಾದ ನಿರ್ಮಲಾ ಗುಬ್ಬಿ, ಆರ್.ಎನ್. ಗಂಗೋಳ ಸೇರಿದಂತೆ 16 ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement