ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನ್ಯಾಷನಲ್ ಇನ್ಸೂರೆನ್ಸ್ನಿಂದ ಸಾರ್ವಜನಿಕ ಸಹಾಯ

Vishwanath S
Updated On : 25 Feb 2014, 11:17 am

ಶಿಗ್ಗಾಂವಿ: ನ್ಯಾಷನಲ್ ಇನ್ಸೂರೆನ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಗೂ ಸಂಸ್ಥೆಯು ಅಭಿವೃದ್ಧಿ ಪತದತ್ತ ದಾಪುಗಾಲಿಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಧಾರವಾಡದ ನ್ಯಾಷನಲ್ ಇನ್ಸೂರೆನ್ಸ್ ಸಂಸ್ಥೆಯ ಡಿವಿಜಿನಲ್ ಮ್ಯಾನೇಜರ್ ಮಂಜುನಾಥ ಮೈಸೂರು ಹೇಳಿದರು.
ಪಟ್ಟಣದ ಪೋಸ್ಟ್ ಆಫೀಸ್ ಎದುರಿಗೆ ನೂತನವಾಗಿ ಆರಂಭವಾದ ನ್ಯಾಷನಲ್ ಇನ್ಸೂರೆನ್ಸ್ ಸಂಸ್ಥೆಯ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 107 ವರ್ಷದ ಹಿಂದಿನ ಕಂಪನಿ ಇದಾಗಿದ್ದು ಇಲ್ಲಿವರೆಗೆ ರು. 6,600 ಕೋಟಿಗೂ ಮಿಕ್ಕಿ ವ್ಯವಹಾರ ದಾಟಿದೆ. ಸುಮಾರು 1,000 ಶಾಖೆಗಳನ್ನು ಸಂಸ್ಥೆ ಹೊಂದಿದ್ದು, ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲ ಸಾರ್ವಜನಿಕರಿಗೆ ಸಂಸ್ಥೆಯು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದರು.
ಹಾವೇರಿಯ ರಿಜಿನಲ್ ಆಫಿಸರ್ ಎಸ್.ಕೆ. ಕುಲಕರ್ಣಿ ಮಾತನಾಡಿ, ಸಂಸ್ಥೆಯು ಜನರಿಗಾಗಿಯೇ ಇದ್ದು, ಜನರಿಗೋಸ್ಕರ ಜನರ ಬಾಗಿಲಿಗೆ ಮುಟ್ಟಿಸುವ ಹಾಗೂ ಹಲವಾರು ಇನ್ಸುರೆನ್ಸ್ಗಳನ್ನು ಸಂಸ್ಥೆ ಹೊರ ತಂದಿದ್ದು, ಇದರ ಸದುಪಯೊಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಾವೇರಿ ಬ್ರ್ಯಾಂಚ್ ಮ್ಯಾನೇಜರ್ ಪಿ.ವಿ. ವಡವಿ, ಶಿಗ್ಗಾವಿ ಶಾಖೆಯ ದಿನೇಶ ಕಾಮತ್ ಮಾತನಾಡಿದರು. ಸಾರ್ವಜನಿಕರು ಉಪಸ್ಥಿತರಿದ್ದು ನೂತನ ಶಾಖೆಗೆ ಆರಂಭಕ್ಕೆ ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement