ಭರತನಾಟ್ಯ ಪರೀಕ್ಷೆ: ಶೇ.100 ಸಾಧನೆ
ಹಾನಗಲ್ಲ: ಮುಂಬಯಿಯಲ್ಲಿರುವ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ಹಾನಗಲ್ಲ ನಗರದ ಹೆಜ್ಜೆ ಗೆಜ್ಜೆ ನೃತ್ಯ ಕಲಾ ವೇದಿಕೆ ವಿದ್ಯಾರ್ಥಿಗಳು ಸತತ ಮೂರನೇ ವರ್ಷವೂ ಶೇ. 100ರಷ್ಟು ಫಲಿತಾಂಶ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಪರಿಚಯ ಪರೀಕ್ಷೆಯಲ್ಲಿ 11 ವಿದ್ಯಾರ್ಥಿಗಳು, ಪ್ರಾರಂಭಿಕ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು, ಪ್ರವೇಶಿಕ ಪ್ರಥಮ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು, ಪ್ರವೇಶಿಕ ಪೂರ್ಣ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು, ಮಧ್ಯಮ ಪ್ರಥಮ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು, ಮಧ್ಯಮ ಪೂರ್ಣ ಪರೀಕ್ಷೆಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಒಟ್ಟು 26 ವಿದ್ಯಾರ್ಥಿಗಳು ಪರಿಚಯ ಹಾಗೂ ಪ್ರಾರಂಭಿಕ ಪರೀಕ್ಷೆಗಳ ಪ್ರಮಾಣ ಪತ್ರ ಪಡೆದಿದ್ದಾರೆ. 18 ವಿದ್ಯಾರ್ಥಿಗಳು ಪ್ರವೇಶಿಕ ಪ್ರಥಮ, ಪ್ರವೇಶಿಕ ಪೂರ್ಣ, ಮಧ್ಯಮ ಪ್ರಥಮ, ಮಧ್ಯಮ ಪೂರ್ಣ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ. 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಎಲ್.ಎಚ್. ಗುತ್ತೆಮ್ಮ, ರೀನಾ ಕಾಟೇಕರ, ಮುಕ್ತಾ ಶೆಟ್ಟರ್, ಹರ್ಷಿತಾ ಹೊಸಮನಿ, ಅರ್ಪಿತಾ ಪಡೆಪ್ಪನವರ, ಸುರಕ್ಷಾ ಸೋಮಸಾಗರ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಹೆಜ್ಜೆ ಗೆಜ್ಜೆ ನೃತ್ಯ ಕಲಾವೇದಿಕೆ ಸಂಚಾಲಕ ಕೃಷ್ಣಾ ಲಿಂಗೇರಿ ತಿಳಿಸಿದ್ದಾರೆ.