ಅಡುಗೆ ಅನಿಲ, ಬಸ್‌ಗಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 27
ಸೂಕ್ತ ಕಾಲಕ್ಕೆ ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಾಗದ ವಿರುದ್ದ ಹಾಗೂ ರಾತ್ರಿ ವೇಳೆ ಸಾರಿಗೆ ಬಸ್‌ಗಳು ಬಸ್ ನಿಲ್ದಾಣಕ್ಕೆ ಬಾರದೆ ಹೋಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗ್ರತ ವೇದಿಕೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪಟ್ಟಣದಲ್ಲಿ ಭಾರತ ವಿನಾಯಕ ಗ್ಯಾಸ್ ಏಜೆನ್ಸಿ ಸರಿಯಾಗಿ ಅಡುಗೆ ಅನಿಲ ಪೂರೈಸುತ್ತಿಲ್ಲ ಹಾಗೂ ನಗರದಲ್ಲಿ ಬೆಳಗ್ಗೆಯೇ ಮದ್ಯದಂಗಡಿಗಳು ಬೇಗನೆ ತೆಗೆಯುವುದನ್ನು ನಿರ್ಬಂಧಿಸುವಂತೆ ಹಾಗೂ ರಾತ್ರಿ ವೇಳೆ ಹೊಸ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರದೆ ಹೆದ್ದಾರಿ ಮೇಲೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದ ವೃದ್ಧರಿಗೆ, ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಸಾರಿಗೆ ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ಬರಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸವಣೂರು ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಮದ್ಯದಂಗಡಿಗಳ ಮೇಲೆ 7 ದಿನಗಳೊಳಗಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅಡುಗೆ ಅನಿಲದ ಮೇಲಧಿಕಾರಿಗಳಿಗೆ ವರದಿ ಕುರಿತು ತಿಳಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಮತ್ತು ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಫಕ್ಕಿರೇಶ ಶಿಗ್ಗಾಂವಿ, ಜಿಲಾನಿ ಜಂಗ್ಲಿ, ಇಮಾಮ ಹುಸೇನಿ ಅದಂಭಾಯಿ, ವೆಂಕಟೇಶ ಬಂಡಿವಡ್ಡರ್, ಲಕ್ಷ್ಮಣ ವಡ್ಡರ, ಮಂಜುನಾಥ ತಿ. ವಡ್ಡರ, ಯಲ್ಲಪ್ಪ ವಡ್ಡರ, ರಾಜು ಲಮಾಣಿ, ಗುಜ್ಜಪ್ಪ ಮಾಡಳ್ಳಿ, ನಾಗವ್ವ ವಡ್ಡರ, ಅಕ್ಕಮ್ಮ ವಡ್ಡರ, ಯಂಕವ್ವ ವಡ್ಡರ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.