ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದಿನಿಂದ ಮುರಘೇಂದ್ರ ಶ್ರೀಗಳ ಜಾತ್ರೆ

Lingaraj Badiger
Updated On : 28 Feb 2014, 11:59 am

ಶಿಗ್ಗಾಂವಿ:  ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಶ್ರೀ ಕಾಶೀ ಶಾಖಾಮಠದ ಮುರಘೇಂದ್ರ ಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 28ರಿಂದ ಜರುಗಲಿದೆ. ಫೆ. 28ರಂದು ಪ್ರಾತಃಕಾಲದಲ್ಲಿ ನೀರಲಗಿಯ ಗುರುಲಿಂಗ ಜಂಗಮಠದ ನಿಜಲಿಂಗೇಶ್ವರ ಸ್ವಾಮಿಗಳ ದಿವ್ಯ ಸಾನ್ನಿದ್ಯದಲ್ಲಿ ಮುರಘೇಂದ್ರ ಸ್ವಾಮಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, 24 ಗಂಟೆಗಳ ಕಾಲ ಅಖಂಡ ಶಿವನಾಮ ಸ್ಮರಣೆ ಪ್ರಾರಂಭವಾಗಿ ಸಂಜೆ 4ಕ್ಕೆ ದುರ್ಗಾದೇವಿ ದೇವಸ್ಥಾನದಿಂದ 101 ಜೋಡಿ ಎತ್ತುಗಳ ಮೆರವಣಿಗೆ, ಸುಮಂಗಲೆಯರಿಂದ ಆರತಿ, ಸಕಲ ವಾದ್ಯ, ವೈಭಗಳೊಂದಿಗೆ ಕಳಸಾರೋಹಣ ಜರುಗುವುದು.
ಮಾ. 1ರಂದು ಶ್ರೀ ವೀರಭದ್ರಯ್ಯ ಸ್ವಾಮಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ಪ್ರಸಾದ ವಿನಿಯೋಗವಾಗುವುದು. ಸಂಜೆ 5 ಗಂಟೆಗೆ ಸಕಲ ವಾದ್ಯ, ವೈಭಗಳೊಂದಿಗೆ ಮುರಘೇಂದ್ರ ಸ್ವಾಮಿಗಳ ರಥೋತ್ಸವ ಜರುಗುವುದು.
ಬಳಿಕ ಧರ್ಮಸಭೆಯಲ್ಲಿ ನೀರಲಗಿಯ ಗುರುಲಿಂಗ ಜಂಗಮಠದ ನಿಜಲಿಂಗೇಶ್ವರ ಸ್ವಾಮಿಗಳ ಸಾನ್ನಿದ್ಯ ವಹಿಸುವರು. ಹಿರೇಮಣಕಟ್ಟಿಯ ಚರಂತಿಮಠದ ಶಿವಯೋಗಿ ಸ್ವಾಮಿಗಳು ಸಮ್ಮುಖ ವಹಿಸುವರು. ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸೇರಿದಂತೆ ಜಿಪಂ, ತಾಪಂ ಸದಸ್ಯರು ಮಠಾಧೀಶರು, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಾ. 2ರಂದು ಕಡುಬಿನ ಕಾಳಗ ಜರುಗುವುದು. 3ರಿಂದ 5ರ ವರೆಗೆ ಬಯಲು ಕುಸ್ತಿಗಳು ಜರುಗುವವು ಎಂದು ಪ್ರಕಟಣೆ ತಿಳಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement