ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೇಂದ್ರ, ರಾಜ್ಯ ಯೋಜನೆಗಳ ಲಾಭ ಪಡೆಯಿರಿ

Lingaraj Badiger
Updated On : 28 Feb 2014, 12:00 pm

ರಾಣಿಬೆನ್ನೂರು: ಗ್ರಾಮೀಣ ಪ್ರದೇಶದ ಯುವ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಲಾಭ ಪಡೆಯಲು ಯುವ ಜನತೆ ಮುಂದಾಗಬೇಕೆಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ಪಾಟೀಲ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ನಿಟ್ಟೂರು ಗ್ರಾಮದ ವಿವಿಧ ಯುವಕ-ಯುವತಿ ಸಂಘಗಳ ಆಶ್ರಯದಲ್ಲಿ ತಾಲೂಕಿನ ನಿಟ್ಟೂರು ಗ್ರಾಮದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಮೂಲ ಕಾರಣಿಕರ್ತರು ಎನಿಸಿಕೊಂಡಿರುವ ಯುವ ಜನಾಂಗ ಮನಸ್ಸು ಮಾಡಿದಲ್ಲಿ ಏನನ್ನಾದರು ಸಾಧಿಸಬಹುದು ಎಂದರು. ಉನ್ನತ ಸ್ಥಾನದಲ್ಲಿರುವ ನಾಯಕರೆಲ್ಲ ಯುವ ಜನತೆಯ ಆಶೋತ್ತರಕ್ಕೆ ಸ್ಪಂದಿಸಿ ಯೋಜನೆಗಳನ್ನು ಜಾರಿಗೆ ತಂದು ಅದರ ಲಾಭ ಸುಲಭವಾಗಿ ಯುವ ಜನತೆಗೆ ತಲುಪುವಂತಾದಲ್ಲಿ ದೇಶದ ಯುವ ಜನತೆ ನಿರುದ್ಯೋಗದಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶಪ್ಪ ಬಂದಾಳಿ ಮಾತನಾಡಿದರು. ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ, ತಾಲೂಕು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ಆರ್.ಡಿ. ಹೊಂಬರಡಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಅಶೋಕ ಚವ್ಹಾಣ, ತಾಲೂಕು ಅಧ್ಯಕ್ಷ ಬಿ.ಕೆ. ರಾಜನಹಳ್ಳಿ, ನಿಟ್ಟೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಜ್ಜಪ್ಪ ಚಳಗೇರಿ, ತಾಪಂ ಮಾಜಿ ಅಧ್ಯಕ್ಷೆ ಗೀತಾ ಮುಂದಿನಮನಿ, ತಾಲೂಕು ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಮಾ ಅಹ್ಮದ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಶಿಗ್ಗಾಂವಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಮಹೇಶಗೌಡ ಪಾಟೀಲ, ಹಿರೇಕೆರೂರು ಅಧ್ಯಕ್ಷ ಗುರುಶಾಂತ ಯತ್ನಳ್ಳಿ, ನಿವೃತ್ತ ಶಿಕ್ಷಕ ಶರಣಪ್ಪ ಚಳಗೇರಿ, ಜಯಣ್ಣ ಮಾಗನೂರು, ಶಿವಪ್ಪ ಕರ್ಜಗಿ, ಕರಬಸಪ್ಪ ಕರಡಿ ಹಾಗೂ ಗ್ರಾಮದ ಬಸವೇಶ್ವರ ಯುವಕ ಸಂಘ, ಕಲ್ಮೇಶ್ವರ ಯುವಕ ಸಂಘ, ಬೀರಲಿಂಗೇಶ್ವರ ಯುವಕ ಸಂಘ, ಮಹರ್ಷಿ ವಾಲ್ಮೀಕಿ ಯುವಕ ಸಂಘ, ಡಾ. ಅಂಬೇಡ್ಕರ ಯುವಕ ಸಂಘ, ವೀರಭದ್ರೇಶ್ವರ ಕಲಾ ಹವ್ಯಾಸಿ ಸಂಘ, ಗುತ್ತೆಮ್ಮದೇವಿ ಯುವಕ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಯುವಕ, ಯುವತಿಯರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement