ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆಣ್ಮಕ್ಕಳ ಭಾವನೆ ಅರಿವು ತಾಯಂದಿರು ಮೂಡಿಸಿ

Lingaraj Badiger
Updated On : 28 Feb 2014, 12:08 pm

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 27
ಹದಿಹರೆಯದ ಹೆಣ್ಣುಮಕ್ಕಳ ಭಾವನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ತಾಯಿಂದಿರು ಮಾಡಬೇಕು ಎಂದು ಖ್ಯಾತ ಸ್ತ್ರೀ ತಜ್ಞೆ ಡಾ. ವಿದ್ಯಾವತಿ ನುಡಿದರು.
ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ನಗರ ಸಮುದಾಯ ಅಭಿವೃದ್ಧಿ ಜಾಲ ಕಾರ್ಯಕ್ರಮ ಅಡಿಯಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆಯುವ ಹೆಣ್ಣು ಮಕ್ಕಳಿಗೆ ಸಮತೋಲನ ಆಹಾರವಾದ ಹಣ್ಣು, ತರಕಾರಿ, ಮೊಟ್ಟೆ, ಮೀನು ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕೋಶ ದೇಹ ರಚನೆ ಪರಿಪೂರ್ಣವಾಗಿರುವದಿಲ್ಲ. ಅಂತಹ ಮಕ್ಕಳಿಗೆ ಮದುವೆ ಮಾಡುವುದರಿಂದ ಗರ್ಭಕೋಶದಿಂದ ರಕ್ತಸ್ರಾವವಾಗಿ ಜೀವಹಾನಿ ಆಗುವ ಸಂಭವವಿರುತ್ತದೆ. ಆದ್ದರಿಂದ ಬಾಲ್ಯ ವಿವಾಹ ಮಾಡದೆ ಪೂರ್ಣ ಪ್ರಮಾಣದ ವಯಸ್ಕರಾದ ನಂತರ ವಿವಾಹ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಪುರಸಭೆ ಆರೋಗ್ಯಾಧಿಕಾರಿ ಬಸವರಾಜ ಗಡಾದ, ಪುರಸಭೆ ಸಮುದಾಯ ವ್ಯವಹಾರಗಳ ಅಧಿಕಾರಿ ಉಮಾ ಪಾಳೇಗಾರ, ಯಂಕಣ್ಣ ಮುಳಗುಂದ, ಗಂಗೂಬಾಯಿ ದೇಸಾಯಿ, ಪುರಸಭೆ ಸದಸ್ಯರಾದ ಎನ್.ವಿ. ಪದ್ಮಾ, ಸುನೀತಾ ಬೇಟಗೇರಿ ಮತ್ತಿತರರಿದ್ದರು. ಬಿ.ಎಸ್. ಗಿಡ್ಡಣ್ಣವರ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement