'ಹೋರಾಟದ ಒಂದು ನೋಟ ಕೃತಿ'ಗೆ ನೀಳಾದೇವಿ ದತ್ತಿ ಪ್ರಶಸ್ತಿ
ಬ್ಯಾಡಗಿ: ಕರ್ನಾಟಕ ಲೇಖಕಿಯರ ಸಂಘವು ಸ್ಥಳೀಯ ಹಿರಿಯ ಲೇಖಕಿ, ಚಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಂಕಮ್ಮ ಸಂಕಣ್ಣನವರ ರಚಿಸಿದ ಹೋರಾಟದ ಒಂದು ನೋಟ ಕೃತಿಗೆ 2013-14ನೇ ಸಾಲಿನ ನೀಳಾದೇವಿ ದತ್ತಿ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಡೆದ ಸಮಾರಂಭದಲ್ಲಿ ಲೇಖಕಿ ಸಂಕಮ್ಮ ಸಂಕಣ್ಣವರ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕೃತಿಯು ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಮೋಟೆಬೆನ್ನೂರಿನ ಹುತಾತ್ಮ ಮಹದೇವ ಮೈಲಾರ ಪತ್ನಿ ಸಿದ್ದಮ್ಮ ಜೀವನ ಚರಿತ್ರೆ ಕುರಿತು ಸಂಶೋಧನಾತ್ಮಕ ಗ್ರಂಥವಾಗಿದೆ.
ಈ ಸಂದರ್ಭದಲ್ಲಿ ಪ್ರೊ. ಮರುಳಸಿದ್ದಪ್ಪ, ಮಾಜಿ ಸಚಿವೆ ರಾಣಿ ಸತೀಶ, ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಲೇಕಕಿಯರಾದ ಎ. ಪಂಕಜ, ಲಲಿತಾಂಬ ಚಂದ್ರಶೇಖರ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ, ಶೂದ್ರ ಶ್ರೀನಿವಾಸ, ಉಷಾ ರೈ, ಇಂದಿರಾ ಶರ್ಮಾ, ಮಹದೇವ ಮೈಲಾರ ಪುತ್ರಿ ಕಸ್ತೂರಮ್ಮ ಹಾಗೂ ನಾಡಿನ ಅನೇಕ ಲೇಖಕರು ಉಪಸ್ಥಿತರಿದ್ದರು.
ಅಭಿನಂದನೆ: ಪ್ರಶಸ್ತಿಗೆ ಭಾಜನರಾದ ಸಂಕಮ್ಮ ಅವರಿಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ಸತೀಶ್ ಕುಲಕರ್ಣಿ, ಗಂಗಾಧರ ನಂದಿ, ಶ್ರೀಶೈಲ ಹುದ್ದಾರ, ಡಾ. ಪಿ.ಟಿ. ಲಕ್ಕಣ್ಣನವರ ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ, ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲೂಕಾಧ್ಯಕ್ಷ ಮಾಲತೇಶ ಅರಳಿಮಟ್ಟಿ, ನಿಕಟಪೂರ್ವ ಅಧ್ಯಕ್ಷ ಪ್ರೊ. ಸಿ. ಶಿವಾನಂದಪ್ಪ, ಚನ್ನಮ್ಮ ಕೋರಿಶೆಟ್ಟರ್, ಜೀವರಾಜ ಛತ್ರದ, ಶಕುಂತಲ ದಾಳೇರ, ಪ್ರೇಮ ಬಿನ್ನಾಳ ಇನ್ನಿತರರು ಅಭಿನಂದಿಸಿದ್ದಾರೆ.