ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಖರೀದಿ ಕೇಂದ್ರ ಏ. 15ರ ವರೆಗೆ ಮುಂದುವರಿಸಿ: ಉದಾಸಿ

Vishwanath S
Updated On : 1 Mar 2014, 11:16 am

ಹಾನಗಲ್ಲ: ರಾಜ್ಯ ಸರ್ಕಾರ ಬೆಂಬಲ ಬೆಲೆಯ ಗೋವಿನಜೋಳ ಖರೀದಿ ಕೇಂದ್ರವನ್ನು ಫೆ. 28ರಂದು ಮುಚ್ಚುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಖರೀದಿ ಪ್ರಕ್ರಿಯೆಯನ್ನು ಏ. 15ರ ವರೆಗೆ ಮುಂದುವರಿಸಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ಲಿನಲ್ಲಿ ಇತ್ತೀಚೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆಯಲಾಗುತ್ತಿದೆ. ಅದನ್ನು ಸಂಗ್ರಹಿಸಲು ತಾಲೂಕಿನಲ್ಲಿ ಗೊದಾಮುಗಳ ಸಮಸ್ಯೆ ಎದುರಾಗಿದೆ. ತಾಲೂಕಿನಲ್ಲಿ ಇಲ್ಲಿವರೆಗೆ ಬೆಂಬಲ ಬೆಲೆ ಗೋವಿನಜೋಳ ಖರೀದಿ ಕೇಂದ್ರಗಳ ಮೂಲಕ 1.40 ಲಕ್ಷ ಕ್ವಿಂಟಲ್ ಗೋವಿನಜೋಳ ಖರೀದಿಸಲಾಗಿದೆ. ಇದರಲ್ಲಿ 70 ಸಾವಿರ ಕ್ವಿಂಟಲ್ ಗೋವಿನ ಜೋಳಕ್ಕೆ ಮಾತ್ರ ಹಣ ಪಾವತಿಸಲಾಗಿದೆ. ರೈತರಿಗೆ ಸುಮಾರು ರು. 91 ಲಕ್ಷ ನೀಡಬೇಕಾಗಿದೆ. ಅಲ್ಲದೇ ಇನ್ನುಳಿದ ಗೋವಿನಜೋಳ ಖರೀದಿಸದಿದ್ದರೆ ರೈತರಿಗೆ ಅನ್ಯಾಯವಾಗುತ್ತದೆ. ಖರೀದಿ ಕೇಂದ್ರಗಳನ್ನು ಮುಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ದರ ಕುಸಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ರೈತರು ಖಾಸಗಿ ವ್ಯಾಪಾರಸ್ಥರಿಂದ ಶೋಷಣೆಗೊಳಗಾಗಲಿದ್ದಾರೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಬೆಂಬಲ ಬೆಲೆ ಗೋವಿನಜೋಳ ಖರೀದಿ ಕೇಂದ್ರಗಳನ್ನು ಏ. 15ರ ವರೆಗೆ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement