ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮರ ಬೆಳೆಸಿ ಪರಿಸರ ರಕ್ಷಿಸಿ

Vishwanath S
Updated On : 1 Mar 2014, 11:16 am

ಹಾನಗಲ್ಲ: ಪರಿಸರ ನಾಶದಿಂದ ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು, ಮನುಷ್ಯ ಸ್ವಾರ್ಥಕ್ಕಾಗಿ ಗಿಡ-ಮರಗಳನ್ನು ಕಡಿಯುತ್ತಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರೂ ಒಂದು ಮರವನ್ನು ಬೆಳೆಸಿದರೆ ಇಂದು ಎದುರಿಸುತ್ತಿರುವ ಪರಿಸರನಾಶದ ಸಮಸ್ಯೆಯನ್ನು ದೂರಮಾಡಲು ಸಾಧ್ಯ ಎಂದು ದಾವಣಗೆರೆ ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣಾ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಚೀರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಅವಶ್ಯಕತೆ ಇದ್ದು, ಮಕ್ಕಳು ಈಗ ಕಂಪ್ಯೂಟರ್ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಕರು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು. ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ತಯಾರಿಸುವಂತಹ ಕೆಲಸ ಶಿಕ್ಷಕರಿಂದ ನಡೆಯಬೇಕು. ಅನೇಕ ಶಿಕ್ಷಕರು ಪ್ರತಿಭಾವಂತರಿದ್ದು ಅವರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಲ್ಲಣ್ಣ ಅಡಕಿಹಾಳಿ, ಎಸ್.ವಿ. ಮಾಡಳ್ಳಿ, ವಿ.ಎನ್. ಪಾಟೀಲ, ಸಿ.ಜಿ. ಪಾಟೀಲ, ಗೋವಿಂದಪ್ಪ ವಾಲೀಕಾರ ಪಾಲ್ಗೊಂಡಿದ್ದರು. ಸೋಮಣ್ಣ ಅಡಕಿಹಾಳಿ, ಜುಬೇದಾಬೀ ಯಳವಟ್ಟಿ, ನಾಗನಗೌಡ್ರ ಪಾಟೀಲ, ಶಂಕ್ರಣ್ಣ ಅಡಕಿಹಾಳಿ, ಚಂದ್ರಗೌಡ ಪಾಟೀಲ, ರಾಮನಗೌಡ ಪಾಟೀಲ, ಉಮೇಶ ಅಂಗಡಿ, ಬಸವಂತಪ್ಪ ಹುಲ್ಲಾಳ, ಮಲ್ಲನಗೌಡ ಪಾಟೀಲ, ಫಕ್ಕೀರಪ್ಪ ಕಡ್ಡೇರ, ಎಂ.ಎಸ್. ಬಡಿಗೇರ, ಬಸವಣ್ಯಪ್ಪ ಹರಿಜನ ಇದ್ದರು. ಶಿಕ್ಷಕ ಎನ್.ಎಸ್. ಹರಕುಣಿ ಸ್ವಾಗತಿಸಿ, ವಿ.ಬಿ. ಪವಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement