ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆ ನಾಳೆ

Lingaraj Badiger
Updated On : 2 Jan 2014, 12:27 pm

ಶಿಗ್ಗಾಂವಿ: ಪಟ್ಟಣದಲ್ಲಿ ಫೆ. 6ರಿಂದ 14ರ ವರೆಗೆ ಜರುಗಲಿರುವ ತರಳುಬಾಳು ಹುಣ್ಣಿಮೆ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯನ್ನು ಜ. 3ರಂದು ಇಲ್ಲಿಯ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ. ಶಾಸಕ ಬಸವರಾಜ ಬೊಮ್ಮಾಯಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಸೈಯದ್ ಅಜ್ಜಂಪೀರ ಖಾದ್ರಿ, ರಾಜಶೇಖರ ಸಿಂಧೂರ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಬೇಕೆಂದು ತರಳುಬಾಳು ಹುಣ್ಣಿಮೆ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶಂಕ್ರಗೌಡ್ರ ಪಾಟೀಲ ತಿಳಿಸಿದ್ದಾರೆ.
ಸುಷ್ಮಾಗೆ 5ನೇ ರ್ಯಾಂಕ್
ಬ್ಯಾಡಗಿ: ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ 15ನೇ ಅಂತಾರಾಷ್ಟ್ರೀಯ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ಬ್ಯಾಡಗಿಯ ಸುಷ್ಮಾ ಸುರೇಶ ಆಸಾದಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾಳೆ. ನೆಗಳೂರು ಮೊರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಷ್ಮಾಳ ಸಾಧನೆಗೆ ಪ್ರಾಚಾರ್ಯರು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಪುಸ್ತಕ ದಾನಕ್ಕೆ ಮನವಿ
ಹಾವೇರಿ: ರಾಣಿಬೆನ್ನೂರಿನ ಸರ್ಕಾರಿ ಬಾಲಮಂದಿರದಲ್ಲಿ 15ರಿಂದ 18 ವಯೋವಾನದ 50 ಮಕ್ಕಳು ವಾಸಿಸುತ್ತಿದ್ದು, ಮಕ್ಕಳ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಲು ಬಾಲಮಂದಿರದಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಈ ಗ್ರಂಥಾಲಯಕ್ಕೆ ಪುಸ್ತಕಗಳ ಅಗತ್ಯವಿದೆ. ಸಾರ್ವಜನಿಕರು ಹಾಗೂ ಸಂಸ್ಥೆಗಳಲ್ಲಿ ಓದಿ ಮುಗಿಸಿದ, ಮಕ್ಕಳಿಗೆ ಉಪಯುಕ್ತವಾದ ಪುಸ್ತಕ ದಾನ ಮಾಡುವಂತೆ ಬಾಲಮಂದಿರ ಪರವೀಕ್ಷಣಾಧಿಕಾರಿಗಳು ಕೋರಿದ್ದಾರೆ. ಮಾಹಿತಿಗೆ ಕಚೇರಿ ದೂ. 08373-266289, ಮೊ. 9900257227 ಸಂಪರ್ಕಿಸಬಹುದು.
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಶಿಗ್ಗಾಂವಿ: ಪಟ್ಟಣದ ಹೊರವಲದ ಗಂಗೀಭಾವಿ ರಸ್ತೆಯಲ್ಲಿನ ಕಾಡನಕಟ್ಟೆ ಕೆರೆ ಹತ್ತಿರ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಕೃಷಿಕ ಸಮಾಜದ ಶಿಗ್ಗಾಂವಿ ತಾಲೂಕು ಅಧ್ಯಕ್ಷ ಜಿನ್ನಪ್ಪ ಮಹಾದೇವಪ್ಪ ಧಾರವಾಡ (58) ಮೃತಪಟ್ಟವರು. ಶಿಗ್ಗಾಂವಿಯಿಂದ ತನ್ನ ಸ್ವಗ್ರಾಮ ಹೊಸೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಶಿಗ್ಗಾಂವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ: ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ಎನ್.ಡಿ. ಮರಿಗೌಡ್ರ, ಉಕ ಕರವೇ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ, ಸುಜಾತಾ ಮಸರಕಲ್, ಮಲ್ಲಮ್ಮ ಸೋಮನಕಟ್ಟಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement