ನಾಳೆ ಮಧುಮೇಹ ತಪಾಸಣೆ
ಶಿಗ್ಗಾಂವಿ: ಪಟ್ಟಣದ ಹುಲಗೂರು ರಸ್ತೆಯ ಆಶ್ರಯ ಕಾಲನಿಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಜ. 3ರಂದು ಉಚಿತ ಮಧುಮೇಹ ತಪಾಸಣೆ, ಚಿಕಿತ್ಸೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ ಜಿ.ಸಿ ನಿಡಗುಂದಿ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9ರಿಂದ ತಪಾಸಣೆ ಮತ್ತು ಚಿಕಿತ್ಸೆ ಪ್ರಾರಂಭವಾಗಲಿದೆ. ಪ್ರಥಮ ನೋಂದಾಯಿತ ಕನಿಷ್ಠ 200 ವ್ಯಕ್ತಿಗಳ ತಪಾಸಣೆ ಮಾಡಲಾಗುವುದು. 40 ವರ್ಷ ಮೀರಿದ ಆಸಕ್ತರು ಜ. 2ರಂದು ಸಂಜೆ 5ರೊಳಗೆ ಹೆಸರು ನೋಂದಾಯಿಸಬೇಕು. ಸ್ಥೂಲಕಾಯರು, ಕಡಿಮೆ ದೈಹಿಕ ಶ್ರಮವಿದ್ದು, ಹೆಚ್ಚಿನ ಮಾನಸಿಕ ಒತ್ತಡವಿರುವವರು, ಕುಟುಂಬದಲ್ಲಿ ಮಧುಮೇಹ ಇತಿಹಾಸ ಉಳ್ಳವರು, ಕಾಲುಗಳ ಉರಿ, ಅತಿ ಮೂತ್ರ ವಿಸರ್ಜನೆ, ಹೆಚ್ಚಿನ ಹಸಿವು, ಬಾಯಾರಿಕೆ, ಬಳಲಿಕೆ, ಬಾಯಿ ವಾಸನೆ, ಜನನೇಂದ್ರಿಯದ ಸೋಂಕು ಇದ್ದವರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ. 8123074762 ಅಥವಾ 9448004378 ಸಂಪರ್ಕಿಸಬಹುದು.
ಉದ್ಘಾಟನೆ: ಕಾರ್ಯಾಗಾರವನ್ನು ಜ. 3ರ ಬೆಳಗ್ಗೆ 10 ಗಂಟೆಗೆ ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರಹ್ಲಾದ ಜೋಶಿ, ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿ.ಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಆಯುಷ್ ಇಲಾಖೆ ನಿರ್ದೇಶಕ ವಿಜಯಕುಮಾರ ಗೋಗಿ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್, ಜಿಪಂ ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡರ, ಜಿಪಂ ಸಿಇಒ ಕೆ.ವಿ. ಅಂಜನಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಘವೇಂದ್ರ ಸ್ವಾಮಿ ಆಗಮಿಸುವರು.