ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೀಮೆಎಣ್ಣೆ ವಿತರಕರಿಗೆ ಆಹಾರಧಾನ್ಯ ನೀಡಿ

Lingaraj Badiger
Updated On : 2 Jan 2014, 12:27 pm

ಶಿಗ್ಗಾಂವಿ: ಹಲವು ವರ್ಷಗಳಿಂದ ಪರವಾನಗಿ ಪಡೆದು ಸೀಮೆಎಣ್ಣೆ ವಿತರಣೆ ಮಾಡುತ್ತಿರುವ ಮಾಲೀಕರಿಗೆ ಸರ್ಕಾರ ತಕ್ಷಣ ಆಹಾರ ಧಾನ್ಯ ವಿತರಣೆಗೆ ಅವಕಾಶ ನೀಡಬೇಕು ಎಂದು ಪಡಿತರ ಕಿರುಕುಳ ಸೀಮೆಎಣ್ಣೆ ವಿತರಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಎಚ್. ತಹಸೀಲ್ದಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆದ ರಾಜ್ಯ ಪಡಿತರ ಕಿರುಕುಳ ಸೀಮೆಎಣ್ಣಿ ವಿತರಕರ ಸಂಘದ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚು ಜನರು ಕಿರುಕುಳ ಸೀಮೆಎಣ್ಣೆ ವಿತರಕರಿದ್ದು, ಅವರು 30 ವರ್ಷಗಳಿಂದ ಇದೇ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅನಿಲ ಸಹಿತ ಕಾರ್ಡುದಾರರ ಹಾಗೂ ಎಪಿಎಲ್ ಕಾರ್ಡುದಾರರಿಗೆ ಸೀಮೆಎಣ್ಣೆ ವಿತರಣೆ ರದ್ದು ಪಡಿಸಲಾಗಿದ್ದು, ಅದರಿಂದ ವಿತರಕರು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಸೀಮೆಎಣ್ಣೆ ಮಾರಾಟವನ್ನೇ ಅವಲಂಬಿತರು ವರಮಾನವಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ಸೀಮೆಎಣ್ಣೆ ವಿತರಣೆ ಜೊತೆಗೆ ಅಕ್ಕಿ, ಗೋಧಿ, ಸಕ್ಕರೆ ಸೇರಿದಂತೆ ಇತರ ಆಹಾರ ಧಾನ್ಯ ವಿತರಣೆಗೆ ಅವಕಾಶ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ರಾಜ್ಯ ಪಡಿತರ ಕಿರುಕುಳ ಸೀಮೆಎಣ್ಣ್ಣೆ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಎಸ್. ಹಳವಳ್ಳಿ, ಕಾರ್ಯದರ್ಶಿ ಅಶೋಕ ಖುರ್ಸಾಪುರ, ಸದಸ್ಯರಾದ ಬಿ.ಎನ್. ಯಳ್ಳೂರ, ವಿ.ಎಸ್. ವಾಲಿಶೆಟ್ಟರ್, ಪ್ರಕಾಶ ಕುಲಕರ್ಣಿ, ವಿ.ಬಿ. ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement