ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾಸ್ಟೆಲ್‌ಗಳಿಗೆ ಸೌಕರ್ಯ ಕಲ್ಪಿಸಿ

Lingaraj Badiger
Updated On : 2 Jan 2014, 12:33 pm

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ. 1
ಪಟ್ಟಣದ ವಿದ್ಯಾರ್ಥಿನಿಲಯಗಳು ಮೂಲಭೂತ ಸೌಕರ್ಯಗಳಿಲ್ಲದೆ ನಲುಗುತ್ತಿದ್ದು, ಅಲ್ಲಿರುವ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ದೇವರಾಜ ಹಂಚಿನಮನಿ ಮಾತನಾಡಿ, ಪಟ್ಟಣದಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳು ಸ್ವಂತ ಕಟ್ಟಡ, ಕೊಠಡಿಗಳಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇಲ್ಲಿ ನೀರು, ವಸತಿ ಸಮಸ್ಯೆ ಅತಿಯಾಗಿದ್ದು, ಪ್ರತಿ ಕೋಣೆಯಲ್ಲೂ 80 ವಿದ್ಯಾರ್ಥಿಗಳು ವಸತಿ ಮಾಡುವಂತಾಗಿದೆ.
ಕೆಲವೆಡೆ ಸಮರ್ಪಕವಾಗಿ ನೀರು, ಗುಣಮಟ್ಟದ ಊಟ ದೊರೆಯದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳನ್ನು ಪುನಃ ಪರೀಶೀಲಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ, ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಜ. 4ರಂದು ಹಿರೇಕೆರೂರು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ವೇಳೆ ಪ್ರತಿಭಟನೆ ನಡೆಸಿ, ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ತಾಲೂಕು ಬಿಸಿಎಂ ಅಧಿಕಾರಿ ಜಿ.ಬಿ. ಮುತ್ತಗಿ ಹಾಗೂ ಸಮಾಜ ಕಲ್ಯಾಣಾಧಿಕಾರಿ ಡಿ. ಮಂಜಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪರಿಷತ್ತಿನ ತಾಲೂಕು ಕಾರ್ಯದರ್ಶಿ ನಂದನಕುಮಾರ, ಕಾರ್ಯಕರ್ತರಾದ ನೂತನ ಚಕ್ರಸಾಲಿ, ವಿಜಯಕುಮಾರ, ಬಸವರಾಜ ಆನ್ವೇರಿ, ಚೇತನ ವಾಲಿ, ಕಿರಣ ಡಾಂಗೆ, ವೆಂಕಟೇಶ ಡಾಂಗೆ, ದೇವರಾಜ ಕೆ., ಆನಂದ ಎ.ಜಿ., ಕಿರಣ ಓಲೇಕಾರ, ಮಹೇಶ ಎಲ್.ಸಿ., ಸುನೀಲ ಬಿ. ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement