ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟಿಪ್ಪು ಜಾತ್ಯತೀತ ವ್ಯಕ್ತಿ: ಅಬ್ದುಲ್ ರಜಾಕ್

Lingaraj Badiger
Updated On : 3 Jan 2014, 12:31 pm

ಸವಣೂರು: ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿಗೆ ಸೀಮಿತನಾದ ವ್ಯಕ್ತಿಯಲ್ಲ. ಅವರ ಜಯಂತಿಯನ್ನು ಎಲ್ಲ ಜಾತಿ-ಜನಾಂಗದವರೂ ಸೇರಿ ಆಚರಿಸಬೇಕು. ಅವರ ಜಾತ್ಯತೀತ ಸಿದ್ಧಾಂತ ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಹೇಳಿದರು.
ಹಜರತ್ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾ ವೇದಿಕೆ ತಾಲೂಕು ಘಟಕದ ವತಿಯಿಂದ ಟಿಪ್ಪು 263ನೇ ಜನ್ಮ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸದ್ಭವನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾ ಹೋರಾಟಗಾರನ ಜನ್ಮದಿನವನ್ನು ಸರ್ಕಾರ ರಜಾದಿನವಾಗಿ ಘೋಷಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಭಾವಚಿತ್ರ ಹಾಕಬೇಕೆಂದು ಆಗ್ರಹಿಸಿದರು.
ಅಬ್ದುಲ್ ಖಾದರ ದುಖಾನದಾರ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರವೇ ಶಹರ ಅಧ್ಯಕ್ಷ ಪರಶುರಾಮ ಈಳಿಗೇರ, ಜಿಲ್ಲಾ ಯುವ ಅಧ್ಯಕ್ಷ ಸೈಯದ್ ಸಾಹೇಬ ಖಾದ್ರಿ, ಬಾಷಾಸಾಬ ಕಣವಿ, ಶಹರ ಘಟಕದ ಉಪಾಧ್ಯಕ್ಷ ನೌಶಾದ್ ಬೇಗ್ ಮಿರ್ಜಾ, ಮುಕ್ತಿಯಾರ್ ಅಹ್ಮದ್ ಮನಿಯಾರ, ಇಖ್ಬಾಲ್ ಬೆಣ್ಣಿ, ಪೀರ ಅಹ್ಮದ್ ಗವಾರಿ, ಮುಜಾಹಿದ್ಖಾನ ಅರಣಿ, ತಬರೇಜಖಾನ ಡಂಬಳ, ಶಾನವಾಜ್ ಗೋಳಸಂಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement